ಬರೂರು ಗ್ರಾಪಂಗೆ ಮಂಜುನಾಥ್ ಅಧ್ಯಕ್ಷ

9thyagarthi2
ಬರೂರು ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರನ್ನು ಕಾಂಗ್ರೆಸ್ ಪ್ರಮುಖರು ಸನ್ಮಾನಿಸಿದರು. ಸೋಮಶೇಖರ್ ಲಾವಿಗ್ಗೆರೆ, ಪುಟ್ಟಪ್ಪ, ಶಿವಮೂರ್ತಿ, ಜಾನ್ ಇತರರಿದ್ದರು.
Published on

ತ್ಯಾಗರ್ತಿ: ಸಮೀಪದ ಬರೂರು ಗ್ರಾಪಂ ಅಧ್ಯಕ್ಷರಾಗಿ ಎಚ್.ಮಂಜುನಾಥ್ ಅಲಿಯಾಸ್ ದೇವರಾಜ್, ಉಪಾಧ್ಯಕ್ಷರಾಗಿ ಅನ್ನಪೂರ್ಣಾ ಪುಟ್ಟಪ್ಪ ಅವಿರೋಧವಾಗಿ ಆಯ್ಕೆಯಾದರು.

13 ಸದಸ್ಯ ಬಲದ ಪಂಚಾಯಿತಿಯಲ್ಲಿ 10 ಜನ ಸದಸ್ಯರು ಹಾಜರಿದ್ದರು. ಚುನಾವಣಾ ಅಧಿಕಾರಿಯಾಗಿ ಸಾಗರ ತಾಪಂ ಅಕ್ಷರದಾ ಸೋಹ ಸಹಾಯಕ ನಿರ್ದೇಶಕ ಪ್ರಸನ್ನ ಕುಮಾರ್ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಮುಖಂಡರಾದ ಸೋಮಶೇಖರ್ ಲಾವಿಗ್ಗೆರೆ, ಎಲ್.ಆರ್.ವೀರಪ್ಪ, ಪುಟ್ಟಪ್ಪ, ಶಿವಮೂರ್ತಿ, ಕನ್ನಪ್ಪ ಮುಳಕೆರೆ, ಜಾನ್, ಖಂಡೋಜಪ್ಪ, ಜಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net