ಉದ್ಯಮಿರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಭಟ್​ಗೆ ಸನ್ಮಾನ

kmt Sanman
Published on

ಕುಮಟಾ: ಸಮಾಜ ಸೇವೆಯ ತುಡಿತವೇ ಸಾಧನೆಗೆ ಮೊದಲ ಮೆಟ್ಟಿಲು. ಶ್ರಮ ಹಾಗೂ ಗುಣ ಸಂಪನ್ನತೆಯಿಂದಾಗಿ ಮಂಜುನಾಥ ಭಟ್ಟ ಅವರನ್ನು ಪ್ರಶಸ್ತಿ ಹುಡುಕಿ ಬಂದಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಡಿ.ಡಿ. ಭಟ್ ಹೇಳಿದರು.

ಹೊಳೆಗದ್ದೆಯ ನಾಗಮ್ಮ ಪ್ರಕಾಶನದ ಆಶ್ರಯದಲ್ಲಿ ಉದ್ಯಮಿರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಭಟ್ ಅವರಿಗೆ ಸುವರ್ಣಗದ್ದೆಯ ಅವರ ಮನೆಯಂಗಳದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ನಾಗಮ್ಮ ಪ್ರಕಾಶನದ ಸಂಸ್ಥಾಪಕ ಪಿ.ಆರ್. ನಾಯ್ಕ, ಉದ್ಯಮದಲ್ಲಿ ಬೆಳೆಯುತ್ತಲೇ ಇತರರ ಕಷ್ಟಕ್ಕೂ ನೆರವಾಗುತ್ತ ಪ್ರಚಾರ ಪ್ರಸಿದ್ಧಿ ಬಯಸದೇ ಕಾಯಕಯೋಗಿಯಾದ ಮಂಜುನಾಥ ಭಟ್​ರಿಗೆ ಉದ್ಯಮಿ ರತ್ನ ಪ್ರಶಸ್ತಿ ಬಂದಿರುವುದು ಹೆಮ್ಮೆ ಮತ್ತು ಇತರರಿಗೆ ಮಾದರಿ ಎಂದರು.

ದೇವಗಿರಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಟಿ. ನಾಯ್ಕ, ಹೊಳೆಗದ್ದೆ ಹಾಗೂ ಸುತ್ತಮುತ್ತಲಿನ ಹಲವಾರು ಕುಟುಂಬದ ಜನರಿಗೆ ಮಂಜುನಾಥ ಭಟ್ ಉದ್ಯೋಗದಾತರು ಎಂದರು.

ಸನ್ಮಾನಿತರಾದ ಉದ್ಯಮಿರತ್ನ ಪ್ರಶಸ್ತಿ ಪುರಸ್ಕೃತ ಮಂಜುನಾಥ ಭಟ್ ಮಾತನಾಡಿ, ಊರಿನವರಿಂದ ಸನ್ಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಶಸ್ತಿಯನ್ನು ನಮ್ಮ ಉದ್ಯೋಗಿಗಳಿಗೆ ಅರ್ಪಿಸುತ್ತೇನೆ ಎಂದರು.

ಗ್ರಾಪಂ ಸದಸ್ಯರಾದ ದೇವೇಂದ್ರ ಶೇರುಗಾರ, ಪಾಂಡು ಪಟಗಾರ, ಉದ್ಯಮಿ ಸಚಿನ ನಾಯ್ಕ, ಸುರೇಶ್ ಹರಿಕಾಂತ, ಜೆ.ಕೆ. ನಾಯ್ಕ, ಜನಾರ್ಧನ ಹರ್ನಿರು, ಸುಬ್ರಾಯ ಶಾನಭಾಗ, ಮಹೇಶ ನಾಯ್ಕ ಮಾತನಾಡಿದರು. ಮಂಜುನಾಥ ಭಟ್ ಕುಟುಂಬದ ಮಾದೇವಿ ಭಟ್ಟ, ವಿದ್ಯಾಭಟ್ಟ, ಗಜಾನನ ಭಟ್ಟ, ಯುವಜನ ಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ, ಸುರೇಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net