ಬಸವನಾಳ ಗ್ರಾಪಂಗೆ ಮಂಜುಳಾ ಅಧ್ಯಕ್ಷೆ

13 SGN 1
Published on

ಶಿಗ್ಗಾಂವಿ: ತಾಲೂಕಿನ ಬಸವನಾಳ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಮಂಜುಳಾ ಮಾದರ, ಉಪಾಧ್ಯಕ್ಷೆಯಾಗಿ ದ್ರಾಕ್ಷಾಯಿಣಿ ಬಾರಕೇರ ಅವಿರೋಧವಾಗಿ ಆಯ್ಕೆಯಾದರು.

ಮಂಗಳವಾರ ಹಮ್ಮಿಕೊಂಡ ಚುನಾವಣೆಯ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ಮಾದರ, ಉಪಾಧ್ಯಕ್ಷ ಸ್ಥಾನಕ್ಕೆ ದ್ರಾಕ್ಷಾಯಿಣಿ ಬಾರಕೇರ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಪಾಲಯ್ಯನಕೋಟೆ ವಿಶ್ವನಾಥ ಅವಿರೋಧ ಆಯ್ಕೆ ಘೋಷಿಸಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಂಜುಳಾ ಮಾದರ, ದ್ರಾಕ್ಷಾಯಿಣಿ ಬಾರಕೇರ ಮಾತನಾಡಿ, ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಂಡು, ಗ್ರಾಮಸ್ಥರ ಸಲಹೆ ಮೇರೆಗೆ ಗ್ರಾಮದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸದಸ್ಯರಾದ ಬಸವರಾಜ ಕುಡವಕ್ಕಲಿಗರ, ಬಸವರಾಜ ಹರಕುಣಿ, ಮಂಜುನಾಥ ರಾಮಗೇರಿ, ಸಿದ್ದಲಿಂಗಪ್ಪ ಕೆರಿ, ಗುರುರಾಜ ವಿಜಾಪುರ, ಹೊಳಲವ್ವ ಹಾಲಕೇರಿ, ಬನೇರಾ ಸಂದಿಮನಿ, ಮಲ್ಲವ್ವ ತಳವಾರ, ದೇವಪ್ಪ ಚಾಕಲಬ್ಬಿ, ಶಿವಕುಮಾರ ಬಿಜಾಪುರ, ಬಸವರಾಜ ಬಿಜಾಪುರ, ನಿಂಗಪ್ಪ ಅತ್ತಿಗೇರಿ, ಫಕೀರಪ್ಪ ಕುರುಬರ, ಫಕೀರಪ್ಪ ತಳವಾರ, ಭೀಮಪ್ಪ ಲಚ್ಚಮ್ಮನವರ, ಎಲ್ಲಪ್ಪ ತಳವಾರ, ಉಮೇಶಪ್ಪ ಬಿಜಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net