ಮಂಜುಳಾ ಬೆನಕನಹಳ್ಳಿ ಗ್ರಾಪಂ ಅಧ್ಯಕ್ಷೆ, ಸಿ.ಎಂ.ಮಮತಾ ಉಪಾಧ್ಯಕ್ಷರಾಗಿ ಆಯ್ಕೆ

IMG-20240715-WA0022
Published on
  • ತಿ.ನರಸೀಪುರ : ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಮಂಜುಳಾ ಶಿವಸ್ವಾಮಿ, ಉಪಾಧ್ಯಕ್ಷರಾಗಿ ಸಿ.ಎಂ.ಮಮತಾ ಆಯ್ಕೆಯಗೊಂಡರು.
    ಮಂಟೇಲಿಂಗ, ಎಸ್.ದೀಪಾ ಅವರ ರಾಜೀನಾಮೆನಿಂದ ತೆರವಾದ ಸ್ಥಾನಗಳಿಗೆ ಸೋಮವಾರ ಗ್ರಾಪಂ ಕಚೇರಿಯಲ್ಲಿ ಚುನಾವಣೆ ನಿಗದಿಯಾಗಿತ್ತು. ಪ.ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ಶಿವಸ್ವಾಮಿ ಮತ್ತು ಗಂಗಾಧರಸ್ವಾಮಿ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಎಂ.ಮಮತಾ ಹಾಗೂ ಜ್ಯೋತಿ ನಾಮಪತ್ರ ಸಲ್ಲಿಸಿದ್ದರು.
    ತಲಾ 9 ಮತ ಪಡೆದ ಮಂಜುಳಾ ಶಿವಸ್ವಾಮಿ ಅಧ್ಯಕ್ಷೆಯಾಗಿ, ಸಿ.ಎಂ.ಮಮತಾ ಉಪಾಧ್ಯಕ್ಷೆಯಾಗಿ ಚುನಾಯಿತರಾದರು. ಕ್ರಮವಾಗಿ 6 ಮತಗಳನ್ನು ಪಡೆದ ಗಂಗಾಧರಸ್ವಾಮಿ ಹಾಗೂ ಜ್ಯೋತಿ ಪರಾಭವಗೊಂಡರು. ಪಂಚಾಯಿತಿಯ 15 ಸದಸ್ಯರು ಭಾಗವಹಿಸಿದ್ದರು. ಚುನಾವಣಾಧಿಕಾರಿಯಾಗಿ ಜಿ.ಪಂ ಎಇಇ ಚರಿತಾ, ಸಹಾಯಕ ಚುನಾವಣಾಧಿಕಾರಿಯಾಗಿ ನಾಗರಾಜು ಕಾರ್ಯನಿರ್ವಹಿಸಿದರು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಅಧ್ಯಕ್ಷ, ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
  • ಗ್ರಾ.ಪಂ ಸದಸ್ಯರಾದ ಚೆನ್ನಮಲ್ಲಿಕಾರ್ಜುನಸ್ವಾಮಿ(ಮಲ್ಲಪ್ಪ), ಬಿ.ಮಧುಕುಮಾರ್, ಕೊಪ್ಪಲು ವಿ.ಪ್ರಮೋದ್, ಭಾಗ್ಯಲಕ್ಷ್ಮೀ ನಾರಾಯಣ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ, ತಾ.ಪಂ ಮಾಜಿ ಅಧ್ಯಕ್ಷ ಬೆ.ಗು.ಶಿವಸ್ವಾಮಿ, ತಾಲೂಕು ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ಪಿಡಿಒ ಜಿ.ಗಾಯತ್ರಿ, ಕಾರ್ಯದರ್ಶಿ ಸತೀಶ್ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net