

ಮಡಿಕೇರಿ: ಪ್ರೊ.ಬಿ.ಕೃಷ್ಣಪ್ಪರವರು ಸ್ಥಾಪಿಸಿದ, ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ನೇತೃತ್ವದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೆದಮುಳ್ಳೂರು ಬಾರಿಕಾಡು ಪೈಸಾರಿಯ ಗ್ರಾಮ ಸಂಚಾಲಕರಾಗಿ ವೈ.ಆರ್.ಮಂಜು, ಸಂಚಾಲಕಿಯಾಗಿ ಬೆಳ್ಳೆ ಆಯ್ಕೆಯಾಗಿದ್ದಾರೆ.
ಕೊಡಗು ಜಿಲ್ಲಾ ಸಮಿತಿಯ ಸಂಚಾಲಕಿ ಗಾಯತ್ರಿ ನರಸಿಂಹ ಅವರ ಮುಂದಾಳತ್ವದಲ್ಲಿ ವಿರಾಜಪೇಟೆಯಲ್ಲಿ ಇತ್ತೀಚೆಗೆ ನಡೆದ ಸಮಿತಿ ಸಭೆಯಲ್ಲಿ ಕೆದಮುಳ್ಳೂರು ಬಾರಿಕಾಡು ಪೈಸಾರಿಯ ಗ್ರಾಮ ಮಟ್ಟದ ಸಮಿತಿಯನ್ನು ರಚಿಸಲಾಯಿತು.
ಗ್ರಾಮ ಸಂಘಟನಾ ಸಂಚಾಲಕರಾಗಿ ರಘು, ಸುಬ್ರಮಣಿ, ಸಿದ್ದು, ವೈ.ಬಿ.ದಿನೇಶ್, ಚಿಪ್ಪು, ವೈ.ಕೆ.ಮಂಜು, ವೈ.ಬಿ.ಮಂಜು, ವೈ.ಕೆ.ಪಾಲ ಆಯ್ಕೆಯಾಗಿದ್ದಾರೆ. ಗ್ರಾಮ ಸಂಘಟನಾ ಸಂಚಾಲಕಿಯರಾಗಿ ಸರಸು, ಮುತ್ತಕ್ಕಿ, ಪಿ.ಎಂ.ಬೆಳ್ಳೆ, ಚುಂಡೆ, ಗಂಗೆ, ಪಿ.ಸಿ.ಕಮಲ, ಮಂಜುಳಾ, ಗೀತಾ ಅವರನ್ನು ನೇಮಕಗೊಂಡಿದ್ದು, ಸಮಿತಿ ಸದಸ್ಯರುಗಳಾಗಿ ೨೬ ಮಂದಿ ಆಯ್ಕೆಯಾಗಿದ್ದಾರೆ.