ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಓಣಂ ಸಂಭ್ರಮ

mng--29 Aug suraksha Onam
Published on

ಮಂಗಳೂರು: ಹೊಸಂಗಡಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಕೇರಳದ ಓಣಂ ಹಬ್ಬ ಆಚರಿಸಲಾಯಿತು. ಈ ವೇಳೆ ಸಂಸ್ಥೆಯ ಸಿಬ್ಬಂದಿಗಳು ಓಣಂ ಪೂಕಳಂ ಜತೆಗೆ ಇಸ್ರೋದ ಚಂದ್ರಯಾನ - 3 ಯ ಸವಿ ನೆನಪಿಗಾಗಿ ಹೂವಿನಲ್ಲಿ ಚಂದಿರ ಸಹಿತ ರಾಕೆಟ್ ರಚಿಸಿದರು.


ಕಾರ್ಯಕ್ರಮವನ್ನು ಡಾ.ಮುರಲಿ ಮೋಹನ್ ಚೂಂತಾರು ಉದ್ಘಾಟಿಸಿ, ಕೇರಳದ ನಾಡ ಹಬ್ಬ ಓಣಂ ರಾಜ್ಯಕ್ಕೆ ಸೇರಿದಂತೆ ಇಡೀ ದೇಶಕ್ಕೆ ಸುಭೀಕ್ಷೆಯನ್ನು ನೀಡಲಿ ಎಂದು ಹಾರೈಸಿದರು.


ಈ ವೇಳೆ ಸಂಸ್ಥೆಯ ವೈದ್ಯೆ ಡಾ.ರಾಜಶ್ರೀ ಮೋಹನ್, ಡಾ.ಶರತ್ ಪಾರೆ ಸುಳ್ಯ, ಡಾ.ಟಾಮ್ ತಂಪಿ, ದಿವಾಕರ್, ದಂತ ಪರಿಚಾರಕಿಯರಾದ ರಮ್ಯ, ಚೈತ್ರ, ಸುಶ್ಮಿತಾ, ಜಯಶ್ರೀ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net