ಮಂಜೇಶ್ವರ ಗ್ರಾಪಂ ಆರೋಗ್ಯ ಇಲಾಖೆ ಸಭೆ

awareness
ಮಂಜೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಆರೋಗ್ಯ ಇಲಾಖೆ ಸಭೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀನ್ ಲವೀನಾ ಮೆಂತೆರೋ, ವೈದ್ಯಾಧಿಕಾರಿ ಡಾ.ಪ್ರಭಾಕರ್ ಶೆಟ್ಟಿ ಮೊದಲಾದವರಿದ್ದರು.
Published on

ಮಂಜೇಶ್ವರ: ಸಾಂಕ್ರಾಮಿಕ ರೋಗ ತಡೆಗಟ್ಟುವುದು, ಮುಂಜಾಗ್ರತಾ ಕ್ರಮ, ಆಶಾ ಕಾರ್ಯಕರ್ತೆಯರ ಅವಲೋಕನ ಸಭೆ ಮಂಜೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಜರುಗಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀನ್ ಲವೀನಾ ಮೆಂತೆರೋ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕಾರಿ ಡಾ.ಪ್ರಭಾಕರ್ ಶೆಟ್ಟಿ ರೋಗಗಳ ಬಗ್ಗೆ ಮಾಹಿತಿ ನೀಡಿದರು. ನಿರ್ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಆರೋಗ್ಯ ಚಟುವಟಿಕೆಗಳಲ್ಲಿ ಆಶಾ ಕಾರ್ಯಕರ್ತೆಯರ ಕರ್ತವ್ಯವನ್ನು ಅಭಿನಂದಿಸಲಾಯಿತು.

ಮಂಜೇಶ್ವರ ಅರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಜಂಟಿಯಾಗಿ ಸಾಂಕ್ರಾಮಿಕ ರೋಗ ತಡೆಯುವಿಕೆಗೆ ಮತ್ತು ಮಾಹಿತಿ ನೀಡಲು ತೀರ್ಮಾನಿಸಲಾಯಿತು. ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ತೀರ್ಮಾನಿಸಯಿತು.

ಆರೋಗ್ಯ ದೃಷ್ಟಿಯಿಂದ ಆಹಾರ ಸೇವನ ಕೇಂದ್ರಗಳಲ್ಲಿ, ಹೋಟೆಲ್, ಗೂಡಂಗಡಿ, ವಿವಾಹ ಸಭಾಂಗಣಗಳಲ್ಲಿ ಆರೋಗ್ಯ ಇಲಾಖೆ, ಹಸಿರು ಕ್ರಿಯಾಸೇನೆ, ಆಶಾ ಕಾರ್ಯಕರ್ತರು, ಪಂಚಾಯಿತಿ ನೇತೃತ್ವದಲ್ಲಿ ಪರಿಶೋಧನೆ, ದಾಳಿ ನಡೆಸಲು ತೀರ್ಮಾನ, ತ್ಯಾಜ್ಯ ಎಸೆಯುವುದು ಕಂಡರೆ ಅಂಥವರ ಮಾಹಿತಿ ನೀಡಲು ಸಾರ್ವಜನಿಕರು ಮುಂದೆ ಬರಲು ಸಾರ್ವಜನಿಕರಲ್ಲಿ ವಿನಂತಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್, ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಸದಸ್ಯರಾದ ಆದರ್ಶ ಬಿ.ಎಂ., ರೇಖಾ ಕೀರ್ತೇಶ್ವರ, ಲಕ್ಷ್ಮಣ ಬಿ.ಎಂ., ಆರೋಗ್ಯ ಇಲಾಖೆಯ ಅಖಿಲ್, ಜ್ಯೋತಿ, ಸಪ್ನಾ ಸಿಸ್ಟರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net