ಮಂಜಪ್ಪ ಭೇರ್ಯ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆ

Berya Grapam 1
ಭೇರ್ಯ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜಪ್ಪ ಅವರನ್ನು ಸದಸ್ಯರು ಅಭಿನಂದಿಸಿದರು. ಸುಧಾಕರ್, ರಂಗಯ್ಯ, ತಿಮ್ಮಪ್ಪ, ರಾಮಪ್ಪ, ಹುಚ್ಚೇಗೌಡ, ಆಟೋ ಯೋಗೇಶ್, ಸಣ್ಣಯ್ಯ, ಪುಟ್ಟಮಾದಯ್ಯ ಇತರರಿದ್ದರು.
Published on

ಸಾಲಿಗ್ರಾಮ: ತಾಲೂಕಿನ ಭೇರ್ಯ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಭೇರ್ಯ ಮಂಜಪ್ಪ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಜಯಲಕ್ಷ್ಮೀ ಕೃಷ್ಣೇಗೌಡ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಪ್ರಭಾರ ಅಧ್ಯಕ್ಷರಾಗಿ ರೂಪಾ ಹರೀಶ್ ಅಧಿಕಾರ ವಹಿಸಿಕೊಂಡಿದ್ದರು.ಅಧ್ಯಕ್ಷರ ಆಯ್ಕೆಗೆ ಸೋಮವಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ 15 ಜನ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದು, ಚುನಾವಣಾ ಅಧಿಕಾರಿಯಾಗಿ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಇಲಾಖೆಯ ಮಂಜುನಾಥ್ ಕರ್ತವ್ಯ ನಿರ್ವಹಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಭೇರ್ಯಮಂಜಪ್ಪ ಮತ್ತು ಬಟಿಗನಹಳ್ಳಿ ರೇಖಾ ಮಾದೇವ್ ನಾಮಪತ್ರ ಸಲ್ಲಿಸಿದರು. ನಂತರ ಎರಡು ಗುಂಪುಗಳ ಸದಸ್ಯರು ಚುನಾವಣೆ ಕಣಕ್ಕೆ ಆಗಮಿಸಿದ್ದು ನೋಡುಗರಲ್ಲಿ ಕುತೂಹಲ ಮೂಡಿಸಿತ್ತು.

ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜಪ್ಪ, ರೂಪಾ, ರಾಜಶೇಖರ್, ಕೃಷ್ಣೇಗೌಡ, ಬಿ.ಪಿ.ಪ್ರಕಾಶ್, ಜಯಲಕ್ಷ್ಮೀ, ತಾಯಮ್ಮ, ಶಾಂತಮ್ಮ ರೇಖಾ, ಜ್ಯೋತಿ ಹರ್ಷವರ್ಧನಿ ಬಿ.ಕೆ.ಶಿವಕುಮಾರ್, ಬಿ.ಕೆ.ಕುಮಾರ್, ಮೋಸಿನ್ ತಾಜ್, ಬಿ.ಬಿ.ಶಿವಣ್ಣ ಸೇರಿದಂತೆ 15 ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಭೇರ್ಯ ಮಂಜಪ್ಪ ಅವರು ಎಂಟು ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಎದುರಾಳಿ ರೇಖಾ ಮಾದೇವ್ ಎಳು ಮತಗಳನ್ನು ಪಡೆದು ಸೋಲುಂಡರು.

ಒಂದು ಮತ ಸೆಳೆಯಲು ಎರಡು ಗುಂಪಿನವರು ಸಾಕಷ್ಟು ಕಸರತ್ತು ಮಾಡಿದ್ದರು. ಮಂಜಪ್ಪ ಅವರಿಗೆ ಒಂದು ಮತ ಗೆಲುವು ತಂದುಕೊಟ್ಟರೆ. ಅದೇ ಒಂದು ಮತ ಪಡೆಯಲು ರೇಖಾ ವಿಫಲರಾದರು. 8 ಮತಗಳನ್ನು ಪಡೆದು ಮಂಜಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಘೋಷಣೆ ಮಾಡಿದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಸುಧಾಕರ್, ರಂಗಯ್ಯ, ತಿಮ್ಮಪ್ಪ, ರಾಮಪ್ಪ, ಹುಚ್ಚೇಗೌಡ, ಆಟೋ ಯೋಗೇಶ್, ಸಣ್ಣಯ್ಯ, ಪುಟ್ಟಮಾದಯ್ಯ, ಹರೀಶ್, ಕೃಷ್ಣೇಗೌಡ, ಉದೇಶನಾಯಕ, ಶಿವಕುಮಾರ ನಾಯಕ, ಸಣ್ಣಮೊಗಣ್ಣ, ಈರಯ್ಯ, ಮಿನುಗಾರ ಸಹಕಾರ ಸಂಘದ ಕಾರ್ಯದರ್ಶಿ ಸುಧಾಕರ್, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಧಿಕ್, ಮುಷರತ್, ಪಿಡಿಒ ಪ್ರತಾಪ್, ಜಯಂತ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net