ಮಂಜಣ್ಣ ಸೇವಾ ಬ್ರಿಗೇಡ್‌ನಿಂದ ಚಿತ್ರಾಪುರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 1.50 ಲಕ್ಷ ರೂ. ಹಸ್ತಾಂತರ

IMG_20220828_104216-01
Published on

ಮಂಗಳೂರು: ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೊದ್ಧಾರಕ್ಕೆ ಮಂಜಣ್ಣ ಸೇವಾ ಬ್ರಿಗೇಡ್ ವತಿಯಿಂದ 1.50 ಲಕ್ಷ ರೂ. ಸೇವಾನಿಧಿ ಹಸ್ತಾಂತರಿಸಲಾಯಿತು.
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಜೋಡಿಸುವ ಸಲುವಾಗಿ ಸಂಸ್ಥೆಯ ಸದಸ್ಯರು ಮತ್ತು ಹಿತೈಷಿಗಳ ಸಹಕಾರದಿಂದ ಸಂಗ್ರಹಿಸಿದ ಜೀರ್ಣೋದ್ಧಾರ ಸೇವಾ ನಿಧಿಯಾಗಿದ್ದು, ಭಾನವಾರ ಕ್ಷೇತ್ರದ ಸಮಿತಿಗೆ ಹಸ್ತಾಂತರಿಸಲಾಯಿತು. ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಶಾಸಕ ಡಾ.ವೈ.ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಕುಡುಂಬೂರು ಗುತ್ತು ಗುತ್ತಿನಾರ್ ಜಯರಾಮ್ ಶೆಟ್ಟಿ, ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಗೌರವಾಧ್ಯಕ್ಷ ಮಾಧವ ಸುವರ್ಣ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಕಾರ್ಪೋರೇಟರ್‌ಗಳಾದ ವೇದಾವತಿ, ವರುಣ್ ಚೌಟ, ಹಿಂದು ಯುವ ಸೇನೆ ಸುರತ್ಕಲ್ ನಗರ ಸಂಚಾಲಕ ಪುರುಷೋತ್ತಮ್ ಬಂಗೇರ, ಚಿತ್ರಾಪುರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸಂಚಾಲಕ ಉಮೇಶ್ ಟಿ.ಕರ್ಕೇರ, ಅಧ್ಯಕ್ಷ ಕೇಶವ ಸಾಲಿಯಾನ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುಭಾಷ್ ಶೆಟ್ಟಿ ಮೂಲ್ಕಿ, ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಕಿನ್ನಿಗೋಳಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net