

ಮಂಗಳೂರು: ಶ್ರೀ ಕ್ಷೇತ್ರದ ವರ್ಷಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮಂಜಲಕಟ್ಟೆ ಕೊರ್ದಬ್ಬು ದೇವಸ್ಥಾನದ ಆವರಣದಲ್ಲಿ ನೆರವೇರಿತು.
ಧಾರ್ಮಿಕ ಮುಖಂಡರಾದ ಶ್ರೀನಿವಾಸ ದೇವಾಡಿಗ ದುಗ್ಗನಮನೆ ಆಮಂತ್ರಣ ಪತ್ರಿಕೆ ಬಿಡುಗಡೆ ನೆರವೇರಿಸಿದರು.
ಫೆ.17ರಂದು ಬೆಳಗ್ಗೆ 9 ಗಂಟೆಗೆ ಭಂಡಾರ ಏರಿ, ರಾತ್ರಿ 7 ಕ್ಕೆ ಅನ್ನಸಂತರ್ಪಣೆ, ನಂತರ ಕೊರ್ದಬ್ಬು, ತನ್ನಿಮಾನಿಗ ದೈವಗಳ ನೇಮೋತ್ಸವ ಹಾಗೂ ಫೆ.18ರಂದು ಮಧ್ಯಾಹ್ನ 12 ಗಂಟೆಗೆ ರಾಹು ಗುಳಿಗ ದೈವಕ್ಕೆ ಎಣ್ಣೆಬೂಲ್ಯ ಗಂಟೆ 1 ಕ್ಕೆ ಗಗ್ಗರ ಸೇವೆ, ರಾತ್ರಿ ಗುಳಿಗ ಪಂಜುರ್ಲಿ ದೈವದ ನೇಮೊತ್ಸವ ನಂತರ ಗಡು ಜಾಗಕ್ಕೆ ಮಾರಿಬಲಿ ಹೊರಡಲಿದೆ.
ಈ ಸಂದರ್ಭದಲ್ಲಿ ದೈವಸ್ಥಾನದ ಪ್ರಮುಖರಾದ ಮಂಜುನಾಥ ಪ್ರಭು, ಪುಷ್ಪರಾಜ್ ಮೈಲಿ, ಪುರುಷೋತ್ತಮ್ ಸಹಿತ ಅರ್ಚಕ ವೃಂದ, ಕಾರ್ಯಕಾರಿ ಸಮಿತಿ ಸದಸ್ಯರು, ಸ್ವಯಂಸೇವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.