ಮಂಜಗುಣಿ ಮಹಾ ರಥೋತ್ಸವ ಸಂಪನ್ನ

Manjaguni teru
Published on

ಶಿರಸಿ:ರಾಜ್ಯದ ತಿರುಪತಿ ಎಂದು ಪ್ರಸಿದ್ಧವಾದ ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ದೇವರ ರಥೋತ್ಸವ ಮಂಗಳವಾರ ನಡೆಯಿತು.

ಲಕ್ಷಾಂತರ ಭಕ್ತರು ದೇವರ ದರ್ಶನ ಮಾಡಿ ಹಣ್ಣು ಕಾಯಿ ವಿವಿಧ ಸೇವೆಗಳನ್ನು ಸಮರ್ಪಿಸಿದರು. ರಥೋತ್ಸವದ ಅಂಗವಾಗಿ ಬೆಳಗ್ಗೆ ಪ್ರಾತಃ ಮಹಾರಥ ಶುದ್ಧಿ, ರಥ ಪೂಜಾ, ರಥಬಲಿ, ರಥಾಗಮನ, ರಥಾರೋಹಣಪೂಜಾ ಪ್ರಾರ್ಥನಾ ಕಾರ್ಯಕ್ರಮಗಳು ನಡೆದವು. ಬಳಿಕ ರಥ ಎಳೆಯುವ ಕಾರ್ಯಕ್ರಮ ನಡೆಯಿತು. ನೆರೆದ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಭಕ್ತರು ದೇವರ ದರ್ಶನ ಪಡೆದರು.
ಮಂಜುಗುಣಿ ವೆಂಕಟರಮಣ ದೇವರ ರಥೋತ್ಸವದಂದು ಅನೇಕ ಭಕ್ತರು ವಿವಿಧ ಕಾರಣಗಳಿಂದ ತಾವು ಹೊತ್ತಿದ್ದ ಹರಕೆ ತೀರಿಸುತ್ತಾರೆ, ರಥಾರೂಢ ವೆಂಕಟರಮಣನಿಗೆ ಕಡಲೆ ಸಮರ್ಪಣೆ, ಬಾಳೆಹಣ್ಣು ಸಮರ್ಪಣೆ ಮೂಲಕ ಹರಕೆ ತೀರಿಸುತ್ತಾರೆ. ವಿವಿಧ ಕಾರಣಗಳು, ಅನಾರೋಗ್ಯ ಸಮಸ್ಯೆಗೆ ಹರಕೆ ಹೊತ್ತವರು ರಥದ ಗಾಲಿಯ ಬುಡದಲ್ಲಿ ತಮ್ಮ ಮಗುವನ್ನು ಮಲಗಿಸುವ ಮೂಲಕ ಹರಕೆ ತೀರಿಸುತ್ತಾರೆ. ಮಂಗಳವಾರ ಈ ಎಲ್ಲ ಕಾರ್ಯಕ್ರಮಗಳು ನಡೆದವು.
ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ಭಟ್, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net