ಮಾಂಜಾ'ದಾರ'ಕ್ಕೆ ಯುವಕ ಬಲಿ

20230609_162307
Published on

ಗದಗ:

ಗಾಳಿಪಟಕ್ಕೆ ಬಳಸುವ ಮಾಂಜಾ ದಾರ ಕುತ್ತಿಗೆಗೆ ಸಿಲುಕಿದ ಪರಿಣಾಮ ಕುತ್ತಿಗೆ ಹರಿದು ಯುವಕ ಬಲಿಯಾದ ಘಟನೆ ನಗರದಲ್ಲಿ ಜರುಗಿದೆ. ವಿಜಯ ನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವನಕೆರೆ ಗ್ರಾಮದ ರವಿ(32) ಮೃತ ದುರ್ದೈವಿ.

ಗದಗ ನಗರದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರವಿ, ಜೂ. 4 ರಂದು ನಗರದ ಡಂಬಳ ನಾಕಾ ಬಳಿ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಗಾಳಿಪಟ ದಾರ ಕುತ್ತಿಗೆಗೆ ಸಿಲುಕಿದೆ. ಬೈಕ್ ವೇಗದ ರಭಸಕ್ಕೆ ಕುತ್ತಿಗೆ ಸಿಳಿತ್ತು. ತಕ್ಷಣವೇ ಜಿಲ್ಲಾಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದ ಶುಕ್ರವಾರ ಮೃತಪಟ್ಟಿದ್ದಾರೆ.

ಇಂತದ್ದೆ ಎರಡು ಪ್ರಕರಣ ನಗರದಲ್ಲಿ ಜರುಗಿದ್ದು, ಜಿಲ್ಲಾಸ್ಪತ್ರೆಯಲ್ಲಿ  ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪರಿಸರ ವಿಭಾಗ ವಿಫಲ:
ಮಾಂಜಾದಾರ ನಿಷೇಧಿಸುವಂತೆ ನಾನಾ ಸಂಘಸಂಸ್ಥೆಗಳು ಜಿಲ್ಲಾಧಿಕಾರಿ ಕಚೇರಿ, ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾಂಜಾ ದಾರ ನಿಷೆಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಅಧಿಕಾರಿಗಳು ಕೆಲವು ಕಡೆ ದಾಳೆ ನಡೆಸಿ ಮಾಂಜಾ ದಾರವನ್ನು ವಶಪಡಿಸಿಕೊಂಡಿದ್ದರು. ಮತ್ತೆ ಎಂದಿನಂತೆ ನಗರದಾದ್ಯಂತ ಮಂಜಾ ದಾರ ಮಾರಾಟ ಮುಂದುವರೆದಿದೆ. ನಗರಸಭೆ ಪರಿಸರ ವಿಭಾಗದ ಇಂಜಿನಿಯರ್ ಆನಂದ ಬದಿ ಅವರು ಜಿಲ್ಲಾಧಿಕಾರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ವಿಫಲರಾಗಿದ್ದಾರೆ. ಆಡಳಿತದ ವೈಫಲ್ಯ ಕಾರಣ ಒಂದು ಜೀವ ಬಲಿಯಾಗಿದ್ದು, ಹೊಣೆ ಯಾರು ಎಂಬಂತಾಗಿದೆ.

ಕೋಟ್:
ಮಾಂಜಾ ದಾರ ನಿಷೇಧಿಸುವ ಬಗ್ಗೆ ಹಲವು ದೂರುಗಳು ಬಂದಿವೆ. ಈ ಹಿನ್ನೆಲೆ ಮಾಂಜಾ ದಾರ ನಿಷೇಧಿಸುವಂತೆ ಆದೇಶವನ್ನೂ ಮಾಡಲಾಗಿತ್ತು. ಸದ್ಯದ ಪ್ರಕರಣ ಕುರಿತು ಮಾಹಿತಿ ಪಡೆಯುತ್ತೇನೆ.
- ವೈಶಾಲಿ ಎಂ.ಎಲ್. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net