ಸಿಂಗಾಪುರದ ರಂಗ ತರಬೇತಿಗೆ ಮನೀಷ್ ಆಯ್ಕೆ

mng-27sep-Manish
Published on


ಮಂಗಳೂರು : ಸಿಂಗಾಪುರದ ಪ್ರತಿಷ್ಠಿತ ಅಂತರ್ ಸಾಂಸ್ಕೃತಿಕ ರಂಗ ಅಧ್ಯಯನ ಸಂಸ್ಥೆಯ 3 ವರ್ಷಗಳ ವೃತ್ತಿಪರ ನಾಟಕ ತರಬೇತಿಗೆ ನಗರದ ದೇರೇಬೈಲಿನ ಮನೀಷ್ ಗೊಡ್ಲಿನ್ ಪಿಂಟೊ ಆಯ್ಕೆಯಾಗಿದ್ದಾರೆ. ಹೈದರಾಬಾದಿನಲ್ಲಿ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ಮನೀಷ್ ಅವರು ಮಾಂಡ್ ಸೊಭಾಣ್ ಪ್ರವರ್ತಿತ ನಾಟಕ ರೆಪರ್ಟರಿ ಕಲಾಕುಲ್ ಇದರ ಹಳೇ ವಿದ್ಯಾರ್ಥಿಯಾಗಿದ್ದು, 2019 ರ ಸಾಲಿನ ಶ್ರೇಷ್ಠ ಕಲಾ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದರು. 2022-23 ನೇ ರಾಷ್ಟ್ರೀಯ ನಾಟಕ ಶಾಲೆ (ತ್ರಿಪುರ) ಇಲ್ಲಿಂದ ಪದವಿ ಪಡೆದಿದ್ದಾರೆ. ನಂತರ ಮಣಿಪುರ, ತ್ರಿಪುರ, ಕಾಶ್ಮೀರ ಇಲ್ಲಿ ರಂಗ ತರಬೇತಿ ನೀಡಿದ್ದಾರೆ.ಕೊಂಕಣಿ, ಕನ್ನಡ, ತುಳು, ಹಿಂದಿ ಭಾಷೆಯ ಇಪ್ಪತ್ತಕ್ಕೂ ಧಿಕ ನಾಟಕಗಳಲ್ಲಿ ನಟಿಸಿದ್ದು, ನಾಲ್ಕು ನಾಟಕಗಳಿಗೆ ನಿರ್ದೇಶನ ನೀಡಿದ್ದಾರೆ.
ಸಿಂಗಾಪುರದ ತರಬೇತಿಯಲ್ಲಿ ಸಮಕಾಲೀನ ರಂಗಭೂಮಿಯ ಬಗ್ಗೆ ಸಮಗ್ರ ಕಲಿಕೆ ಇರಲಿದ್ದು, ನಟನೆ, ಆಂಗಿಕ ಅಭಿನಯ, ಧ್ವನಿ ನಿಯಂತ್ರಣ, ರಂಗಭೂಮಿಯ ತಾಂತ್ರಿಕತೆಗಳ ಕಲಿಕೆ ಒಳಗೊಂಡಿದೆ. ಮನೀಷ್ ಅವರು ಸಂಸ್ಥೆಯ ತರಬೇತಿಗೆ ಇದುವರೆಗೆ ಕರ್ನಾಟಕದಿಂದ ಆಯ್ಕೆಯಾದ ಮೂರನೇ ರಂಗಕರ್ಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net