

ಕೊಪ್ಪಳ: ಮಣಿಪುರದಲ್ಲಿ ನಡೆಯುತ್ತಿರುವ ಕ್ರೈಸ್ತರ ಮೇಲಿನ ಹಿಂಸಾಚಾರ, ಮಾರಣ ಹೋಮ ಮತ್ತು ಚರ್ಚ್‌ಗಳ ಧ್ವಂಸ ಖಂಡಿಸಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾ ಹಾಗೂ ತಾಲೂಕು ಘಟಕದ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಶನಿವಾರ ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ರಜನಿಕಾಂತ್ ಕೆಂಗೇರಿಗೆ ಮನವಿ ಸಲ್ಲಿಸಿದರು.
300ಕ್ಕೂ ಹೆಚ್ಚು ಕ್ರೈಸ್ತರನ್ನು ಹತ್ಯೆ ಮಾಡಿ, 250ಕ್ಕೂ ಹೆಚ್ಚು ಚರ್ಚ್‌ಗಳನ್ನು ಧ್ವಂಸ ಮಾಡಲಾಗಿದೆ. ಮಹಿಳೆಯರ ಮೇಲೆ ಹೀನಾಯ ಕೃತ್ಯ ಎಸಗಲಾಗಿದೆ. ಸಾವಿರಾರು ಜನ ಆಸ್ತಿ ಕಳೆದುಕೊಂಡಿರುತ್ತಾರೆ. ಮಣಿಪುರ ರಾಜ್ಯದಲ್ಲಿ ಹಿಂಸಾಚಾರಕ್ಕೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾ ಘಟಕದ ಗೌರವಾಧ್ಯಕ್ಷ ಸಾಲೋಮನ್ ರಾಜ್, ಪ್ರಮುಖರಾದ ಜೆ.ರವಿಕುಮಾರ್, ಚಾರ್ಲ್ಸ್, ಬಸವರಾಜ, ದೇವೇಂದ್ರ ನಾಯಕ, ನಥಾನಿಲ್, ಶ್ಯಾಮ್ ಸುಂದರ್ ಹುಣಸಿ ಮರದ, ಡಿ.ಆರ್.ಪೀಟರ್, ಚನ್ನಬಸಪ್ಪ ಜಾಲಿಹಾಳ, ಬಸವರಾಜ ಶೀಲವಂತರ, ಮಹಾಂತೇಶ್ ಕೋತಬಾಳ ಇತರರಿದ್ದರು.