ಒಂದು ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ರಪ್ತು: ರಾಜೀವ್ ಚಂದ್ರಶೇಖರ್

IMG-20231017-WA0025
Published on


ಉಡುಪಿ: ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಸ್ತುತ ಕಾಲಟ್ಟದಲ್ಲಿರುವ ವಿದ್ಯಾರ್ಥಿಗಳು ಅದೃಷ್ಟಶಾಲಿಗಳಾಗಿದ್ದು, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಕೇವಲ ಘೊಷಣೆಗಳಿಗೆ ಸೀಮಿತವಾಗದೆ ಕಾರ್ಯಗತವಾಗುತ್ತಿದೆ. 2014ರಲ್ಲಿ ಶೇ.82ರಷ್ಟು ಮೊಬೈಲ್ ಫೋನ್ ಆಮದು ಮಾಡಿಕೊಳ್ಳುತ್ತಿದ್ದ ಭಾರತ 2023ರಲ್ಲಿ ಒಂದು ಲಕ್ಷ ಕೋಟಿ ಮೊತ್ತದ ಮೊಬೈಲ್ ಫೋನ್ ರಪ್ತು ಮಾಡಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾರ್ಷಿಕೋತ್ಸವ, ಟೆಕ್ತತ್ವ&23 ಉದ್ಘಾಟಿಸಿ ಮಾತನಾಡಿದ ಅವರು,  ನೂತನ ಸಂಸತ್ ಭವನದ ಉದ್ಘಾಟನೆ ಬಳಿಕ ಮೊದಲ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು, ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಿದೆ.  ಭಾರತವು ಅಭಿವೃದ್ಧಿಯ ಕ್ಷಿಪ್ರ ಹಂತದಲ್ಲಿದೆ. ಶೇ.100ರಷ್ಟು ಭಾರತದಲ್ಲಿ ತಯಾರಿಸಿದ, ವಿನ್ಯಾಸಗೊಳಿಸಿದ, ನವೀನ ಮತ್ತು ಶಿಕ್ಷಣ ಪಡೆದಿರುವ ಮೇಡ್ ಇನ್ ಇಂಡಿಯಾ ಆ್ಯಪಲ್ 15  ಮೊಬೈಲ್  ೋನ್ಗಳು ವಿಶ್ವದ ಎಲ್ಲೆಡೆ ಬಿಡುಗಡೆಯಾಗಿದೆ ಎಂದರು.

 ಡಿಜಿಟಲ್ ಆರ್ಥಿಕತೆಯು 2014 ರಲ್ಲಿ ಒಟ್ಟಾರೆ ಜಿಡಿಪಿಯ 4.5 ಪ್ರತಿಶತವನ್ನು ಹೊಂದಿತ್ತು. 2023 ರ ವೇಳೆಗೆ ಒಟ್ಟು ಜಿಡಿಪಿಯ ಶೇಕಡಾ 11.5ಕ್ಕೆ ಮತ್ತು 2026 ರ ವೇಳೆಗೆ ಶೇಕಡಾ 26 ಕ್ಕೆ ಹೆಚ್ಚಾಗುತ್ತದೆ ಎಂದು ಊಹಿಸಲಾಗಿದೆ. ಡಿಜಿಟಲ್ ಆರ್ಥಿಕತೆಯ ಪ್ರತಿಯೊಂದು ವಿಭಾಗವು ಈಗ ಉತ್ಕ್ರಷ್ಟತೆಯನ್ನು ಕಾಣುತ್ತಿದೆ ಎಂದು ಅವರು ಹೇಳಿದರು.

ಎಂಐಟಿಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ  ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಹೆ ಪ್ರೊ ಚಾನ್ಸಿಲರ್ ಎಚ್.ಎಸ್.ಬಲ್ಲಾಳ್, ಉಪಕುಲಪತಿ ಎಂ.ಡಿ.ವೆಂಕಟೇಶ್, ಪ್ರೊ ವೈಸ್ ಚಾನ್ಸಿಲರ್  ಡಾ.ನಾರಾಯಣ ಸಭಾಹಿತ್,  ಕಾರ್ಯನಿರ್ವಹಣಾಧಿಕಾರಿ ಮುತ್ತಣ್ಣ, ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ, ರಿಜಿಸ್ಟಾರ್ ಡಾ. ವಿನೋದ್ ವಿ. ಥಾಮಸ್, ಎಂಐಟೆಯ ಜಂಟಿ ನಿರ್ದೇಶಕ ಡಾ.ಸೋಮಶೇಖರ ಭಟ್, ಎಂಐಟಿಯ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಸಹ ನಿರ್ದೇಶಕಿ ಡಾ.ಪೂರ್ಣಿಮಾ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net