

ಉಡುಪಿ: ಪ್ರಕೃತಿ ಸಂರಕ್ಷಣೆಗೆ ಆದ್ಯ ಕರ್ತವ್ಯವಾಗಬೇಕು. ಸಕಾಲದಲ್ಲಿ ಮಳೆ ಬಂದು ಬೆಳೆ ವೃದ್ಧಿಯಾಗಬೇಕಾದರೆ ಪರಿಸರವನ್ನು ಕಾಪಾಡಿಕೊಳ್ಳಬೇಕು. ಉತ್ತಮ ಪರಿಸರದಿಂದ ಮನುಷ್ಯನ ಆರೋಗ್ಯವೂ ವೃದ್ಧಿಯಾಗಲಿದೆ ಎಂದು ಪದ್ಮಶ್ರೀ ಪುರಸತ ಸಾಲುಮರದ ತಿಮ್ಮಕ್ಕ ಹೇಳಿದರು.
ಭಾನುವಾರ ಸರಳೇಬೆಟ್ಟು ರತ್ನ ಸಂಜೀವ ಕಲಾ ಮಂಡಳಿ ಆವರಣದಲ್ಲಿ ಮಣಿಪಾಲ ಸರಳೇಬೆಟ್ಟಿನ ಶಿವ ಪ್ರೇರಣ ಚಾರಿ-ಟೆಬಲ್ ಟ್ರಸ್ಟ್, ಸ್ನೇಹ ಸಂಗಮ, ಉಡುಪಿಯ ಪರಿವಾರ್ ಚಾರಿಟೆಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಹಮ್ಮಿ-ಕೊಳ್ಳಲಾದ "ಸಸ್ಯೋತ್ಸವ' ಕಾರ್ಯಕ್ರಮವನ್ನು ಅಶ್ವತ್ಥ ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಪ್ರತಿಯೊಬ್ಬ ನಾಗರಿಕನೂ ತನ್ನ ಮನೆಯ ಪರಿಸರದಲ್ಲಿ ಸಸ್ಯಗಳನ್ನು ನೆಡುವ ಮೂಲಕ ಕಾಳಜಿಯಿಂದ ಪರಿಸರ ರಕ್ಷಣೆ ಮಾಡಬೇಕಾಗಿದೆ. ಸಸ್ಯಗಳನ್ನು ನೆಟ್ಟು ಅದನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾವೆಲ್ಲರೂ ಕನಿಷ್ಠ ಹತ್ತು ಗಿಡಗಳನ್ನು ನಡೆಯುವ ಮೂಲಕ ಸಾಲು ಮರದ ತಿಮ್ಮಕ್ಕ ಅವರಿಗೆ ಗೌರವ ಕೊಡುವ ಕೆಲಸ ಮಾಡಬೇಕು ಎಂದರು.
ಈ ಹಿಂದೆ ಬಹಳಷ್ಟ್ಟು ಜನರು ಪದ್ಮಶ್ರೀ ಪ್ರಶಸ್ತಿ ಪಡೆಯಲು ರಾಜಕೀಯ ಪ್ರಭಾವಗಳನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಪ್ರಾಮಾಣಿಕ ವ್ಯಕ್ತಿಯನ್ನು ಗುರುತಿಸಿ , ದೇಶದ ಅಭಿವೃದ್ಧಿಗೆ ಅವರನ್ನು ತೊಡಗಿಸಬೇಕು. ಜನತೆಗೆ ಅವರ ಸಾಧನೆಗಳು ಮಾದರಿಯಾಗಬೇಕು ಎಂಬ ಉದ್ದೇಶದಿಂದ ಸಾಲು ಮರದ ತಿಮ್ಮಕ್ಕ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ. ರುಪತಿ ಭಟ್ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ತಿಮ್ಮಕ್ಕನವರ ಸಾಕು ಮಗ ಉಮೇಶ್, ಬ್ರಹ್ಮಾವರ ಕೃಷಿ ವಿಾನ ಕೇಂದ್ರದ ಡಾ. ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಉದ್ಯಮಿ ಫರ್ವೇಜ್, ಮಾಹೆ ವಿ.ವಿ. ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು, ನಗರಸಭೆ ಸದಸ್ಯೆ ವಿಜಯಲಕ್ಷಿ$್ಮ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಶಿವಾನಂದ ಪ್ರಭು, ಅಶ್ವಿನಿ ಪೂಜಾರಿ, ಸ್ನೇಹ ಸಂಗಮದ ಅಧ್ಯ ಗುರುರಾಜ ಭಂಡಾರಿ ಸರಳೇಬೆಟ್ಟು, ಪ್ರಧಾನ ಕಾರ್ಯದರ್ಶಿ ಸಂದೇಶ ಪ್ರಭು, ಮಂಜುನಾಥ ಮಣಿಪಾಲ, ರಮಾನಂದ ಸಾಮಂತ ಉಪಸ್ಥಿತರಿದ್ದರು.
ನಮಾಮಿ ಗಂಗೆ ಯೋಜನೆಯ ರೂಪುರೇಖೆಗಳ ಬಗ್ಗೆ ಎಂಐಟಿ ಪ್ರಾಧ್ಯಾಪಕ ರಾವೇಂದ್ರ ಹೊಳ್ಳ, ಬ್ರಹ್ಮಾವರ ಕೃಷಿ ವಿಾನ ಕೇಂದ್ರದ ಸಂಚಾಲಕ ಡಾ. ಧನಂಜಯ ಗಿಡ ನೆಡುವ, ಸಂರಕ್ಷಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕನವರನ್ನು ಸಮ್ಮಾನಿಸಲಾಯಿತು. ತಿಮ್ಮಕ್ಕನವರ 112ನೇ ಜನ್ಮ ದಿನೋತ್ಸವದ ಕೈಪಿಡಿಯನ್ನು ರುಪತಿ ಭಟ್ ಬಿಡುಗಡೆಗೊಳಿಸಿದರು. ಶಿವಪ್ರೇರಣ ಚಾರಿ-ಟೆಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿದರು. ನಿತ್ಯಾನಂದ ಪಡ್ರೆ ನಿರೂಪಿಸಿ, ಅತಿಥಿಗಳನ್ನು ಪರಿಚಯಿಸಿದರು. ಮಮತಾ ಸಾಮಂತ್ ವಂದಿಸಿದರು.