

Cancer awareness : ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು "ಬ್ರೇಕಿಂಗ್ ಬ್ಯಾರಿಯರ್ಸಿ, ಬಿಲ್ಡಿಂಗ್ ಅವೇರ್ನಿರ್ಸ" ಅಭಿಯಾನದೊಂದಿಗೆ ಕ್ಯಾನ್ಸರ್ ಜಾಗೃತಿಯನ್ನು ತರುತ್ತಿದೆ.
ಅನೇಕ ಯುವ ಜನರಿಗೆ ಕ್ಯಾನ್ಸರ್ ಇನ್ನು ಭಯಾನಕ ರೋಗವಾಗಿ ಕಂಡುಬರುತ್ತದೆ ಮತ್ತೆ ಅದು ಅವರಿಗೆ ಜೀವನದಲ್ಲಿ ಕಠಿಣ ಸಮಸ್ಯೆಯೆಂದು ಭಾಸವಾಗುತ್ತದೆ. ಜನರು ರೋಗದ ಬಗ್ಗೆ ಬಹಿರಂಗವಾಗಿ ಮಾತನಾಡದಿರುವ ಕಾರಣ ಈ ಆರೋಗ್ಯ ಸಮಸ್ಯೆಯು ಸಾಮಾನ್ಯವಾಗಿ ಭಯ, ಕಟ್ಟುಕತೆ ಮತ್ತೆ ಗೊಂದಲಗಳಿಂದ ತುಂಬಿರುತ್ತದೆ. ಇದು ಅವರ ಸ್ವಂತ ಆರೋಗ್ಯವನ್ನು ನೋಡಿಕೊಳ್ಳಲು ಅಥವಾ ಕ್ಯಾನ್ಸರ್ ಹೊಂದಿರುವ ಕುಟುಂಬಸ್ಥರಿಗೆ ಸಹಾಯ ಮಾಡಲು ಕೂಡ ಕಷ್ಟವಾಗುವಂತೆ ಮಾಡಬಹುದು.
ಹೆಚ್ಚು ತಿಳುವಳಕೆಯುಳ್ಳ ಸಮಾಜವನ್ನು ರಚಿಸಲು ಮತ್ತೆ ಅದರ ಬಗ್ಗೆ ಮಾತನಾಡುವ ಭಯವನ್ನು ಭರವಸೆಯಾಗಿ ಬದಲಾಯಿಸಲು ಯುವಜನರಲ್ಲಿ, ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಲ್ಲಿ ಕ್ಯಾನ್ಸರ್, ಮತ್ತದರ ಅಪಾಯಗಳು, ತಡೆಗಟ್ಟುವಿಕೆ ಮತ್ತೆ ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಜಾಗೃತಿ ಮೂಡಿಸುವ ಅವಕಾಶವಿದೆ. ಹೀಗಾಗಿ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ಡಿಸೆಂಬರ್ 20ರಂದು "ಬ್ರೇಕಿಂಗ್ ಬ್ಯಾರಿಯರ್ಸಿ, ಬಿಲ್ಟಿಂಗ್ಅವೇರ್ನಿರ್ಸ" ಎಂಬ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ನಡೆಸಿತು.
ಸೇಂಟ್ ಫ್ರಾನ್ಸಿಸ್ ಕಾಲೇಜು, ಜ್ಯೋತಿ ನಿವಾಸ್ ಕಾಲೇಜು, ಮೌಂಟ್ ಕಾರ್ಮಿಲ್ ಕಾಲೇಜು, ಹರೈಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮುಂತಾದ ಕಾಲೇಜುಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಯಿತು. ಅಲ್ಲದೆ, ಕ್ಯಾನ್ಸರ್ ಅನ್ನು ಹೇಗೆ ತಡೆಯುವುದು ಎಂಬುದರ ಕುರಿರು ಕಲಿತುಕೊಂಡರು. ಮಣಿಪಾಲದ ಕ್ಯಾನ್ಸರ್ ಕೇರ್ ಸೆಂಟರ್ನ ಅನುಭವಿ ತಜ್ಞರು ಕ್ಯಾನ್ಸರ್ನ ವಿವಿಧ ಅಪಾಯಕಾತಿ ಅಂಶಗಳಾದ ತಂಬಾಕು ಸೇವನೆ, ಆರಂಭಿಕ ಹಂತದ ಪತ್ತೆಹಚ್ಚುವ ವಿಧಾನಗಳು ಮತ್ತೆ ಇತ್ತೀಚಿನ ಚಿಕಿತ್ಸೆಗಳ ಕುರಿತ್ತ ಮಾತನಾಡಿದರು.
ಸರ್ಜಿಕಲ್ ಆಂಕಲಜಿ ಮತ್ತು ರೋಬೋಟಿಕ್ ಸರ್ಜರಿಯ ಕನ್ಸಲ್ಟೆಂಟ್ ಡಾ. ದೇವೇಶ್ ಎಸ್ ಬಲ್ಲಾಳ್ ಮಾತನಾಡಿ. ಅನೇಕರು ಯೇಚಿಸುತ್ತಿರುವ ರೀತಿಗೆ ವಿರುದ್ಧವಾಗಿ, ರೇಬೋಟ್ಗಳು ತಾವಾಗಿಯೇ ಶಸ್ತ್ರಚಿಕಿತ್ಸೆಗಳನ್ನು ಮಾಡುವುದಿಲ್ಲ, ಶಸ್ತ್ರಚಿಕಿತ್ಸಕರು ರೋಬೋಟಿಕ್ ಸಿಸ್ಟಮ್ ಅನ್ನು ಹೆಚ್ಚಿನ ನಿಖರತೆಯೊಂದಿಗೆ ನಿಯಂತ್ರಿಸುತ್ತಾರೆ. ರೋಬೋಟಿಕ್ಸ್ ಶಸ್ತ್ರಚಿಕಿತ್ಸೆಯೊಂದಿಗೆ ರೋಗಿಗಳು ಕಡಿಮೆ ನೋವು ಅನುಭವಿಸುತ್ತಾರೆ. ಅಲ್ಲದೆ, ಕಡಿಮೆ ರಕ್ತವನ್ನು ಕಳೆದುಕೊಳ್ಳುತ್ತಾರೆ ಹಾಗೂ ವೇಗವಾಗಿ ಚೇತರಿಸಿಕೊಳ್ಳುತ್ತಾರೆ. ಕ್ಯಾನ್ಸರ್ ಆರೈಕೆಯಲ್ಲಿನ ಪ್ರಗತಿಯೊಂದಿಗೆ, ಶಸ್ತ್ರಚಿಕಿತ್ಸೆಯಲ್ಲಿಯೂ ಹಲವಾರು ಬದಲಾವಣೆಗಳಾಗಿವೆ. ಆದರೆ, ರೋಬೋಟಿಕ್ ಸ್ತರ್ಜರಿ ಬಗ್ಗೆ ತಪ್ಪು ಕಲ್ಪನೆಗಳು ಮೂಡಿವೆ ಎಂದರು.
ಆರ್ಥೋಪೆಡಿಕ್ಸ್ ಕನ್ಸಲ್ಟೆಂಟ್ ಡಾ.ಶ್ರೇಮಿಂತ್ ಬಿ ಎಸ್ ಮಾತನಾಡಿ, ಮೂಳೆ ಕ್ಯಾನ್ಸರ್ ತುಂಬಾ ಅಪರೂಪ. ಇದು ಹೆಚ್ಚಾಗಿ ಮಕ್ಕಳು ಮತ್ತು ಯುವ ವಯಸ್ಕರ ಮೇಲೆ ಪರಿಣಾಮ ಬೀರುತ್ತದೆ. ಹಿಂದೆ ಅಂಗಛೇದನವು ಏಕೈಕ ಚಿಕಿತ್ಸೆಯಾಗಿತ್ತು. ಆದರೆ, ಈಗ ಶೇ. 95 ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಅಂಗ ಉಳಿಸುವ ಶಸ್ತ್ರಚಿಕಿತ್ಸೆಗಳು ಕಾರ್ಯನಿರ್ವಹಿಸುತ್ತಿವೆ. ಈ ಶಸ್ತ್ರಚಿಕಿತ್ಸೆಗಳು ಯುವ ರೋಗಿಗಳಿಗೆ ಶಾಲೆಗೆ ಹಿಂತಿರುಗಲು, ಕ್ರೀಡೆಗಳನ್ನು ಆಡಲು ಮತ್ತೆ ಸಾಮಾನ್ಯ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದರು.