ವಿಟ್ಲ: ಮಾಣಿಲ ಶ್ರೀ ಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿ ಹಬ್ಬ ಮಹೋತ್ಸವದ ಅಂಗವಾಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ೪೮ ದಿನಗಳಿಂದ ನಡೆಯುತ್ತಿರುವ ಲಕ್ಷ್ಮೀ ಪೂಜೆಯ ಕಲಶವಿಸರ್ಜನೆ ಸೆ.೧ರಂದು ನಡೆಯಲಿದೆ.
ಬೆಳಗ್ಗೆ ೯ಕ್ಕೆ ಪರ್ಜನ್ಯ ಜಪ, ಪರ್ಜನ್ಯ ಹೋಮ, ಚಂಡಿಕಾ ಹೋಮ, ಸಯಂಕಾಲ ದುರ್ಗಾಪೂಜೆ, ಅಷ್ಟವದಾನ ಸೇವೆ, ಕಲಶ ವಿಸರ್ಜೆನೆ ನಡೆಯಲಿದೆ. ಸಾಯಂಕಾಲ ೭ರಿಂದ ಕುಂಬಳೆ ನಾಟ್ಯ ವಿದ್ಯಾಲಯದ ಡಾ. ವಿದ್ಯಾಲಕ್ಷ್ಮಿ ಅವರಿಂದ ನೃತ್ಯ ಸಂಭ್ರಮ ನಡೆಯಲಿದೆ.