ವಿಟ್ಲ: ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ವಿಶೇಷ ಸಂಭ್ರಮ, ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪ್ರತಾಚರಣೆಯ ಅಂಗವಾಗಿ ಆ.೨೬ರಂದು ಮಾತೃಶಕ್ತಿ ಸಮಾವೇಶ ನಡೆಯಲಿದೆ.
ಬೆಳಗ್ಗೆ ೮ಕ್ಕೆ ಸೌಭಾಗ್ಯ ಲಕ್ಷ್ಮೀ ಹೋಮ, ಸೌಭಾಗ್ಯ ಲಕ್ಷ್ಮೀ ಪೂಜೆ, ೯-೯.೩೦ ಶ್ರೀ ದುರ್ಗಾಮಹಾಲಕ್ಷ್ಮೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ, ೯.೩೦ಕ್ಕೆ ಉದ್ಘಾಟನಾ ಸಮಾರಂಭ - ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ರಾಷ್ಟ್ರಸೇವಿಕಾ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯೆ ಡಾ. ಕಮಲಾ ಪ್ರಭಾಕರ್ ಭಟ್ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ ೧೦.೩೦ರಿಂದ ಭಾರತೀಯರ ಪರಂಪರೆ ಉಳಿಸುವಿಕೆಯಲ್ಲಿ ಮಾತೆಯರ ಪಾತ್ರ ಬಗ್ಗೆ ಡಾ. ಆಶಾಜ್ಯೋತಿ ರೈ ಮಾಲಾಡಿ, ೧೧.೧೫ರಿಂದ ಹರಿಕಥಾ ಕಾಲಕ್ಷೇಪ ವೈಭವಿ ಶಂನಾಡಿಗ, ಮಧ್ಯಾಹ್ನ ೧೨ರಿಂದ ಕುಟುಂಬದಲ್ಲಿ ಮಹಿಳೆಯ ಪಾತ್ರ ಬಗ್ಗೆ ಕಸ್ತೂರಿ ಪಂಜ, ಮಧ್ಯಾಹ್ನ ೧೨.೩೦ರಿಂದ ಜಾನಪದ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ೧.೧೫ರಿಂದ ವಿವಿಧ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಗ್ಗೆ ಧನಲಕ್ಷ್ಮೀ ಗಟ್ಟಿ, ೨ರಿಂದ ಯಕ್ಷ - ಗಾನ - ವೈಭವ ತೆಂಕುತಿಟ್ಟು ಯಕ್ಷಗಾನ ರಂಗದ ಯುವ ಭಾಗವತಿ ಸಿಂಚನ, ೩ರಿಂದ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಬಗ್ಗೆ ವಿಜಯ ಶೆಟ್ಟಿ ಸಾಲೆತ್ತೂರು ಮಾತನಾಡಲಿದ್ದಾರೆ. ಸಾಯಂಕಾಲ ೫ರಿಂದ ’ಅಷ್ಟಲಕ್ಷ್ಮೀ ವೈಭವ’ ರಶ್ಮಿ ಚಿದಾನಂದ ಕೆದಿಲಾಯ ಮತ್ತು ಬಳಗ, ೬.೩೦ಕ್ಕೆ ಆಶ್ಲೇಷಾ ಬಲಿ ಪೂಜೆ, ರಾತ್ರಿ ೮ಕ್ಕೆ ಮಹಾಪೂಜೆ ನಡೆಯಲಿದೆ.
ಮಧ್ಯಾಹ್ನಾ ೩.೩೦ರಿಂದ ಸಮಾರೋಪ ಸಮಾರಂಭ - ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರೂ ಸಾದ್ವಿ ಮಾತಾನಂದಮಯಿ ಆಶೀರ್ವಚನ ನೀಡಲಿದ್ದಾರೆ. ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.