ಹಿಂದು ರುದ್ರಭೂಮಿಗಾಗಿ ಒತ್ತಾಯ - ಮಾಣಿಲ ಗ್ರಾಮಸಭೆ

Published on


ವಿಟ್ಲ: ಮಾಣಿಲ ಗ್ರಾಮ ಪಂಚಾಯಿತಿ ಪ್ರಥಮ ಸುತ್ತಿನ ಗ್ರಾಮಸಭೆ ಪಂಚಾಯಿತಿ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆ ತಡವಾಗಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದರು. ಕುಡಿಯುವ ನೀರಿನ ವ್ಯವಸ್ಥೆಗೆ ವಿದ್ಯುತ್ ಬಿಲ್ ಹೆಚ್ಚಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹದಗೆಟ್ಟ ರಸ್ತೆ, ಮಳೆ ನೀರು ರಸ್ತೆಯಲ್ಲಿ ಹರಿಯುವ ಬಗ್ಗೆ ಗ್ರಾಮಸ್ಥರು ಪ್ರಸ್ತಾಪಿಸಿದರು.


ಬಸವ ವಸತಿ ಯೋಜನೆಯ ಮನೆ ವಿದ್ಯುತ್ ತಂತಿಯ ಅಡಿಯಲ್ಲಿಯೇ ನಿರ್ಮಾಣವಾಗಿದ್ದು, ಪಂಚಾಯಿತಿ ಅನುದಾನ ಕೊಟ್ಟದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು. ಅನೇಕ ವರ್ಷಗಳಿಂದ ಹಿಂದು ರುದ್ರಭೂಮಿಗೆ ಒತ್ತಾಯಿಸುತ್ತಿದ್ದರೂ ಮುರುವ ಕೇಂದ್ರ ಸ್ಥಾನದಲ್ಲಿ ಕಾದಿರಿಸಿದ ರುದ್ರಭೂಮಿ ಸುಸಜ್ಜಿತಗೊಳಿಸದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


ನೋಡೆಲ್ ಅಽಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಅಽಕಾರಿ ಭಾಸ್ಕರ್ ಭಾಗವಹಿಸಿದರು. ಕೃಷಿ, ತೋಟಗಾರಿಕೆ, ವೈದಕೀಯ, ಆರಕ್ಷಕ, ಮೆಸ್ಕಾಂ, ಕಂದಾಯ, ಶಿಕ್ಷಣ ಇಲಾಖೆ ಅಽಕಾರಿಗಳು ಮಾಹಿತಿ ನೀಡಿದರು.


ಪಂಚಾಯಿತಿ ಮಾಜಿ ಪ್ರಧಾನ ಮುರುವು ಮಹಾಬಲ ಭಟ್, ಪೆರುವಾಯಿ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್. ನಾರಾಯಣ, ಅಶೋಕ ಶೆಟ್ಟಿ ಬಿರ್ಕಾಪು, ರಾಘವ ಆಚಾರ್ಯ ಮುರುವ, ರಾಜೇಶ್ ದೇಲಂತಡ್ಕ ಮತ್ತಿತರರು ಮಾತನಾಡಿದರು.

ಪಂಚಾಯಿತಿ ಅಭಿವೃದ್ಧಿ ಅಽಕಾರಿ ವಸಂತಿ ಸ್ವಾಗತಿಸಿದರು. ಕಾರ್ಯದರ್ಶಿ ರಾಮನಾಯ್ಕ ಹಿಂದಿನ ಸಭೆಯ ನಡಾವಳಿ ಮಂಡಿಸಿದರು. ಸಿಬ್ಬಂದಿ ಭವ್ಯಾ ಜಮಾ ಖರ್ಚಿನ ವರದಿ ಓದಿದರು. ಸಿಬ್ಬಂದಿ ಮಮತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net