

ವಿಟ್ಲ: ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ೪೮ ದಿನಗಳ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿ ಹಬ್ಬ ಸಂಭ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.
ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ವಹಿಸಿದ್ದರು. ತಂತ್ರಿಗಳಾದ ಪ್ರಸಾದ್ ಪಾಂಗಣ್ಣಾಯ, ಉದ್ಯಮಿಗಳಾದ ಅಮಿತ್ ಕುಮಾರ್ ಬೆಂಗಳೂರು, ಸೀತಾರಾಮ ರೈ ಕೆದಂಬಾಡಿಗುತ್ತು, ಸದಾಶಿವ ಆಚಾರ್ಯ, ಸುದರ್ಶನ ಜೈನ್, ಜಯರಾಜ್ ಪ್ರಕಾಶ್, ವನಿತಾ ವಿ. ಶೆಟ್ಟಿ ಉಪಸ್ಥಿತರಿದ್ದರು.
ರೇಖಾ ಎಸ್. ಕಾಮತ್ ಪ್ರಾರ್ಥಿಸಿದರು. ಕಾರ್ಯಾಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ ಸ್ವಾಗತಿಸಿದರು. ಕ್ಷೇತ್ರದ ಟ್ರಸ್ಟಿ ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಎಚ್. ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದರಿಗೆ ಗೌರವ:
ಸಂಘಟನೆ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ - ಸಂಘಟನೆ, ಧಾರ್ಮಿಕ ಕ್ಷೇತ್ರ ಜಗನ್ನಾಥ ಚೌಟ ಬದಿಗುಡ್ಡೆ, ಕೃಷಿ ಕ್ಷೇತ್ರದ ಮಹಾಲಿಂಗ ನಾಯ್ಕ ಅಮೈ, ಧಾರ್ಮಿಕ ಕ್ಷೇತ್ರದ ಬಿ. ಪ್ರೇಮಾನಂದ ಕುಲಾಲ್ ಕೋಡಿಕಲ್, ಆರೋಗ್ಯ ಕ್ಷೇತ್ರದ ರೇವತಿ ಡೊಂಬಯ್ಯ ಕುಲಾಲ್ ಪರ್ನೆ, ಧಾರ್ಮಿಕ ಕ್ಷೇತ್ರದ ವಾಸುದೇವ ಆರ್. ಕೊಟ್ಟಾರಿ, ವಿಶೇಷ ಸಾಧಕದ ಕೌಶಿಕ್ ಆಚಾರ್ಯ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು.