

ವಿಜಯವಾಣಿ ಸುದ್ದಿಜಾಲ ಧಾರವಾಡ
ಪುಣೆಯ ಭಾರತ ಗಾಯನ ಸಮಾಜವು 2024ನೇ ಸಾಲಿಗೆ ನೀಡುವ ಪದ್ಮಶ್ರೀ ಮಾಣಿಕ್ ವರ್ಮ ಪ್ರಶಸ್ತಿಯನ್ನು ಧಾರವಾಡದ ಗಾಯಕಿ ವಿದುಷಿ ಸುಜಾತಾ ಗುರವ ಅವರಿಗೆ ನೀಡಿದೆ.
ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ ಒಳಗೊಂಡಿದ್ದು, ಅ. 19ರಂದು ಪುಣೆಯ ಗಾಯನ ಸಮಾಜ ಸಭಾಂಗಣದಲ್ಲಿ ದೇವಗಂಧರ್ವ ಪಂ.ಭಾಸ್ಕರಬುವಾ ಬಖಾಲೆ ಜನ್ಮದಿನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.