

ಚನ್ನಮ್ಮನ ಕಿತ್ತೂರು: ಎಂ.ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದು, ಸರ್ವತೋಮುಖ ಅಭಿವದ್ಧಿಗೆ ಪ್ರಣಾಳಿಕೆ ರೂಪಿಸಿ ವಿವಿಧ ಯೋಜನೆ ಹಾಕಿಕೊಂಡಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆ ಕಬ್ಬು ಅರಿಯುವ ಸಾಮರ್ಥ್ಯ ಹೆಚ್ಚಳ, ಆಧುನೀಕರಣ, ಹಳೇ ಸಾಲ ತೀರಿಸುವುದು, ಸರಿಯಾಗಿ ಬಿಲ್ ಪಾವತಿ, ಕಬ್ಬಿಗೆ ಯೋಗ್ಯ ಬೆಲೆ, ಕಾರ್ಖಾನೆ ಕಾರ್ಮಿಕರ ಮಕ್ಕಳಿಗೆ ಮಾಧ್ಯಮಿಕ ಶಿಣ ಸಂಸ್ಥೆ, ರಿಯಾಯಿತಿಯಲ್ಲಿ ಸಕ್ಕರೆ, ಕಾರ್ಖಾನೆ ಸಂಸ್ಥಾಪಕರ ಮ್ಯೂಸಿಯಂ ನಿರ್ಮಿಸುವ ಯೋಜನೆ ಪ್ರಣಾಳಿಕೆಯಲ್ಲಿ ಸೇರಿವೆ. ಕಾರ್ಖಾನೆಯ ಚುನಾವಣೆಯಲ್ಲಿ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ರೆತರ ಪೆನೆಲ್ ಅಭ್ಯರ್ಥಿಗಳಿಗೆ ಆರ್ಶಿರ್ವದಿಸುವಂತೆ ಮನವಿ ಮಾಡಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಈ ಕಾರ್ಖಾನೆಗೆ ರೆತರ ಕೊಡುಗೆ ಅಪಾರವಾಗಿದ್ದು, ಕಾರ್ಖಾನೆ ಕಷ್ಟದಲ್ಲಿದ್ದರೂ ರೆತರಿಂದಾಗಿಯೇ ಉಳಿದಿದೆ. ಪಾತೀತವಾಗಿ ಕಾರ್ಖಾನೆ ಉಳಿಸಿ ವೆಭವ ಮರಳಿಸೋಣ ಎಂದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ಕಾರ್ಖಾನೆ ಉಳಿವಿಗೆ ಎಲ್ಲರೂ ಒಂದಾಗಿ ಶ್ರಮಿಸಬೇಕಾಗಿದ್ದು, ಕಾರ್ಖಾನೆಗೆ ಹೆಚ್ಚು ಜೀವ ತುಂಬುವ ಕೆಲಸ ಮಾಡೋಣ. ರೆತರ ಸಮಸ್ಯೆ ನಿವಾರಣೆಗಾಗಿ ಪಾತೀತವಾಗಿ ಶ್ರಮಿಸೋಣ ಎಂದರು.ಕಾರ್ಖಾನೆಯ ಸರಿಯಾದ ನಿರ್ವಹಣೆ ಮತ್ತು ಅಭಿವೃದ್ಧಿಗೆ ಚನ್ನರಾಜ ಹಟ್ಟಿಹೊಳಿ ಮುಂದಿನ ಕಾರ್ಖಾನೆಯ ಅಧ್ಯ ಎಂದು ೂಷಿಸಿದರು. ಮುಖಂಡರಾದ ಶಂಕರ ಹೊಳಿ, ಸುರೇಶ ಹುಲಿಕಟ್ಟಿ, ಕೀರಪ್ಪ ಸಕ್ರೆಣ್ಣವರ, ಶಿವನಗೌಡ ಪಾಟೀಲ, ಮುದುಕಪ್ಪ ಮರಡಿ, ಶಂಕರಗೌಡ ಪಾಟೀಲ, ಕಷ್ಣ ಬಾಳೆಕುಂದ್ರಿ, ಪ್ರಕಾಶಗೌಡ ಪಾಟೀಲ, ವಿನಾಯಕ ಮರಡಿ, ಮಹಾಂತೇಶ ಮತ್ತಿಕೊಪ್ಪ, ಸುನೀತಾ ಲಂಗೋಟಿ ಇತರರಿದ್ದರು.