ಅಧ್ಯಕ್ಷರಾಗಿ ಮಣಿ ಉತ್ತಪ್ಪ ಆಯ್ಕೆ

Mani Uthappa was elected as the President
Published on

ಮಡಿಕೇರಿ:

ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ 5ನೇ ಬಾರಿಗೆ ಬಲ್ಲಾರಂಡ ಮಣಿ ಉತ್ತಪ್ಪ ಮತ್ತು ಉಪಾಧ್ಯಕ್ಷರಾಗಿ ಪೇರಿಯನ ಪೂರ್ಣಚ್ಚ ಗುರುವಾರ ಆಯ್ಕೆಯಾಗಿದ್ದಾರೆ.

ಈ ಸಂದರ್ಭ ಮಾತನಾಡಿದ ಮಣಿ ಉತ್ತಪ್ಪ. ಸಂಘದ ಅಭಿವೃದ್ಧಿಗೆ 26 ವರ್ಷಗಳ ಕಾಲ ಹಗಲಿರುಳು ದುಡಿದಿದ್ದು ಈ ಬಾರಿ ಅಧ್ಯಕ್ಷರಾಗಿ ಆಯ್ಕೆ ಮಾಡಿದಕ್ಕೆ ಅಬಾರಿಯಾಗಿದ್ದೇನೆ. ಸಂಘದ ಅಭಿವೃದ್ಧಿಗಾಗಿ ದುಡಿಯುವುದಾಗಿ ತಿಳಿಸಿದರು.

ಮಾಜಿ ಉಪಾಧ್ಯಕ್ಷ ಕಣಜಾಲು ಪೂವಯ್ಯ ಮಾಜಿ ನಿರ್ದೇಶಕಿ ಪುತ್ತರಿರ ಸೀತಮ್ಮ ಮೊಣ್ಣಪ್ಪನವರು ಬಲ್ಲಾರಂಡ ಮಣಿಉತ್ತಪ್ಪನವರ ಸೇವೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಮಾಜಿ ನಿರ್ದೇಶಕರುಗಳಾದ ನೂಜಿಬೈಲು ನಾಣಯ್ಯ, ಮರದಾಳು ಉಲ್ಲಾಸ, ಧನಂಜಯ, ಬಟ್ಟೀರ ಅಪ್ಪಣ್ಣ, ಶಾಂತಪ್ಪ, ಅಡಿಕೇರ ಜಯಮುತ್ತಪ್ಪ, ಚೆಟ್ಟಳ್ಳಿ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ಬಲ್ಲಾರಂಡ ಕಂಠಿಕಾರ್ಯಪ್ಪ, ಸಹಪ್ರಮುಖ್ ರವಿ ಎನ್. ಎಸ್., ಸಹಕಾರ ಸಂಘದ ಮುಖ್ಯಕಾರ್ಯ ನಿರ್ವಣಾಧಿಕಾರಿ ನಂದಿನಿ ಕೆ.ಎಸ್. ಇದ್ದರು.

ಚುನಾವಣಾಧಿಕಾರಿಯಾಗಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ವಿ.ಜಿ. ಲೊಕೇಶ್ ಮತ್ತು ಉಪಚುನಾವಣಾಧಿಕಾರಿಗಳಾಗಿ ಚೆಟ್ಟಳ್ಳಿ ಸÀರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ್ ಎನ್. ಎಸ್. ಕಾರ್ಯನಿವಹಿಸಿದರು.
ಸಂಘದ 2023-24 ನೇ ಸಾಲಿನ ಮುಂದಿನ 5ವರ್ಷಗಳಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಅ. 1 ರಂದು ಚುನಾವಣೆ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net