ವಿಟ್ಲ: ಶಾಲೆಯ ಬೀಗ ಮುರಿದ ಕಳ್ಳರು ಶೈಕ್ಷಣಿಕ ಕಾರ್ಯಕ್ಕೆ ಬಳಸುವ ಕಂಪ್ಯೂಟರ್ ಮಾನಿಟರ್ ಕಳವು ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಣಿ ಕರ್ನಾಟಕ ಪ್ರೌಢ ಶಾಲೆ ಮತ್ತು ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ ಒಂದೆ ಆವರಣದಲ್ಲಿದ್ದು, ಆ.29ರ ಸಾಯಂಕಾಲ 6-30 ಬಳಿಕ ಆ.30 ಬೆಳಗ್ಗಿನ ಅವಧಿಯಲ್ಲಿ ಕಳ್ಳರು ಶಾಲಾ ತರಗತಿ ಕೊಠಡಿ ಮತ್ತು ಶಾಲಾ ಆಫಿಸ್ ಕೊಠಡಿಯ ಬಾಗಿಲುಗಳ ಬೀಗವನ್ನು ಮುರಿದು ಒಳಪ್ರವೇಶಿಸಿ 7ಸಾವಿಲ ಮೌಲ್ಯದ ಕಂಫ್ಯೂಟರ್ ಮಾನಿಟರನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ವಿಧ್ಯಾವರ್ಧಕ ಸಂಘ ಮಾಣಿ ಇದರ ಕಾರ್ಯದರ್ಶಿ ಇಬ್ರಾಹಿಂ ಕೆ. ದೂರಿನಲ್ಲಿ ತಿಳಿಸಿದ್ದಾರೆ.