

ವಿಟ್ಲ: ಹುಟ್ಟು ಸಾವಿನ ಮಧ್ಯೆ ನಾವು ಮಾಡಿದ ಪುಣ್ಯದ ಕೆಲಸ ನಮ್ಮನ್ನು ಕಾಪಾಡುತ್ತದೆ. ರುದ್ರಭೂಮಿ ಒಂದು ಮೂಲಸೌಕರ್ಯದ ಭಾಗ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹೇಳಿದರು.
ಮಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕಪ್ಪಕೋಡಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಹಿಂದು ರುದ್ರಭೂಮಿ ಲೋಕಾರ್ಪಣೆ ಮಾಡಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು . ತಾಪಂ ಕಾರ್ಯನಿರ್ವಹಣಾಽಕಾರಿ ಸಚಿನ್‌ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ತಾರಾನಾಥ ಸಾಲ್ಯಾನ್, ಬಂಟ್ವಾಳ ಅಭಿವೃದ್ಧಿ ಪ್ರಾಽಕಾರ ಅಧ್ಯಕ್ಷ ಬೇಬಿ ಕುಂದರ್, ಅಮ್ಮುಂಜೆ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಅಮ್ಮುಂಜೆ, ಹಿಂದು ರುದ್ರಭೂಮಿ ಅಧ್ಯಕ್ಷ ಪ್ರಫುಲ್ಲ ಆರ್. ರೈ ಕಲ್ಲಾಜೆಗುತ್ತು, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯ ಮೇಲ್ವಿಚಾರಕಿ ಆಶಾಪಾರ್ವತಿ, ಮಾಣಿ ಪಿಡಿಒ ಗಿರಿಜಾ, ಉಪಾಧ್ಯಕ್ಷೆ ಸುಜಾತಾ, ನಿಕಟಪೂರ್ವ ಅಧ್ಯಕ್ಷ ಇಬ್ರಾಹಿಂ ಕೆ.ಮಾಣಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಽಕಾರಿ ಡಾ.ಶಶಿಕಲಾ, ಮೆಸ್ಕಾಂ ಅಭಿಯಂತ ಪ್ರಸಾದ್, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಚಂದ್ರಾವತಿ ಉಪಸ್ಥಿತರಿದ್ದರು.
ಮಾಣಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.
ಹುಟ್ಟು ಸಾವಿನಲ್ಲಿ ಘನತೆ ಗೌರವವಿರಬೇಕು. ಈ ನಿಟ್ಟಿನಲ್ಲಿ ಈ ರುದ್ರಭೂಮಿ ನಿರ್ಮಾಣ ಉತ್ತಮ ಬೆಳವಣಿಗೆ. ಗ್ರಾಮದ ಜನರ ಉದ್ದೇಶ ಈಡೇರಿದಂತಾಗಿದೆ.
| ಅರ್ಚನಾ ಭಟ್ ಬಂಟ್ವಾಳ ತಹಸೀಲ್ದಾರ್