ಹಿರಿಯರು ಭಗವಂತನ ಕೊಂಡಿ - ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಚನ - ಸಂಧ್ಯಾ ಮಂಗಲ

PTR_30 JAN_2A
Published on

ವಿಟ್ಲ: ವೃದ್ದಿಯನ್ನು ಹೊಂದಿದವರು ವೃದ್ಧರು ಮತ್ತು ಅವರ ಅನುಭವ, ಅಂತರಂಗ ವಿಕಾಸವಾಗಿರುತ್ತದೆ. ಹಿರಿಯರು ಭಗವಂತನ ಕೊಂಡಿಗಳಾಗಿದ್ದು, ಅವುಗಳು ಕಳಚಿಹೋಗದಂತೆ ನೋಡಿಕೊಳ್ಳಬೇಕು. ಪೀಳಿಗೆ ಉಳಿಸುವ ಮತ್ತು ವಂಶವೃದ್ಧಿಯಾಗಿಸುವ ನಿಟ್ಟಿನಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಸೇವಾ ಸಮಿತಿ, ಕ್ರಿಯಾ ಸಮಿತಿ, ಹವ್ಯಕ ಮಹಾಮಂಡಲ ಮಂಗಳೂರು, ಉಪ್ಪಿನಂಗಡಿ ಮತ್ತು ಮುಳ್ಳೇರಿಯ ಹವ್ಯಕ ಮಂಡಲಗಳು ಆಯೋಜಿಸಿದ ಸಂಧ್ಯಾ ಮಂಗಲ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶಕಟಪುರ ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಮಠದ ಪ್ರಶಸನಾಽಕಾರಿ ಸಂತೋಷ್ ಹೆಗಡೆ, ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ, ಉಪಾಧ್ಯಕ್ಷ ರಾಜಶೇಖರ ಕಾಕುಂಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಮಂಗಳೂರು ಮಂಡಲ ಪ್ರಧಾನ ಗುರಿಕ್ಕಾರರಾದ ಉದಯ ಕುಮಾರ ಖಂಡಿಗ, ಪಿಆರ್‌ಒ ಹರಿಪ್ರಸಾದ್ ಪೆರಿಯಾಪು, ಮಾತೃತ್ವಂ ಸಂಘಟನೆ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಾಣಿಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಉಪಸ್ಥಿತರಿದ್ದರು.

ಭವಿಷ್ಯ ಉಜ್ವಲವಾಗಲೆಂದು ೬೦ ವರ್ಷ ಮೀರಿದವರಿಗೆ ಹಾಕಿಕೊಂಡ ಸಂಧ್ಯಾ ಮಂಗಲ ಕಾರ್ಯಕ್ರಮ ಮರುಜನ್ಮ ನೀಡಿದೆ. ಗುರುವಿನ ಮಂತ್ರೋಪದೇಶದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು. ಸದ್ಗುರುವಿನ ಅನುಗ್ರಹದಿಂದ ಜನ್ಮ ಸಾರ್ಥಕವಾಗುತ್ತದೆ.

| ಶ್ರೀ ಕೃಷ್ಣಾನಂದ ತೀರ್ಥ ಸ್ವಾಮೀಜಿ ಶಕಟಪುರ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net