ಧರ್ಮದ ಕಾರ್ಯದಿಂದ ಸಮಸ್ಯೆಯಾಗದು - ಸಂಸ್ಕೃತ ವೇದಪಾಠ ಶಾಲೆ ವಾರ್ಷಿಕೋತ್ಸವದಲ್ಲಿ ರಾಘವೇಶ್ವರ ಶ್ರೀ ಆಶೀರ್ವಚನ

PTR_11 FEB_3
Published on


ಸಮಾಜದ ಹಿತಕ್ಕಾಗಿ ನಿತ್ಯ ದಾನ ಮಾಡಬೇಕು. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಸಮಾಜಕ್ಕಾಗಿ ಕೆಲಸ ಮಾಡಿದವರು ಯಾವತ್ತೂ ವೈಯಕ್ತಿಕ ಹಿತಾಸಕ್ತಿಗಾಗಿ ಕೈಯೊಡ್ಡುವ ಪರಿಸ್ಥಿತಿ ಬರಲಾರದು ಎಂದು ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಪ್ರತಿಷ್ಠಾಪನಾ ವರ್ಧಂತಿ, ಶ್ರೀರಾಮ ಸಂಸ್ಕೃತ ವೇದಪಾಠ ಶಾಲೆ ವಾರ್ಷಿಕೋತ್ಸವದಲ್ಲಿ ಭಾನುವಾರ ಆಶೀರ್ವಚನ ನೀಡಿದರು.

ಮಾಣಿ ಮಠ, ಮಂಗಳೂರು ಹೋಬಳಿಯ ಶಿಷ್ಯಭಕ್ತರು ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವ ಕಾರಣದಿಂದ ಗುರುಗಳ ಜತೆಗೆ ಬಲಿಷ್ಠ ಒಡನಾಟ ಹೊಂದಿದ್ದಾರೆ. ಗುರುಪೀಠ ಮತ್ತು ಶಿಷ್ಯವರ್ಗದ ನಡುವಿನ ಬಾಂಧವ್ಯ ಶ್ರೀಮಠದಲ್ಲಿ ಉತ್ತಮವಾಗಿರುವುದರಿಂದ ಕೆಲಸಗಳು ಸಾಂಗವಾಗಿ ನಡೆದುಕೊಂಡು ಹೋಗುತ್ತಿದೆ. ಶ್ರೀರಾಮಚಂದ್ರಾಪುರ ಮಠದ ಶಿಷ್ಯರು ದಾನ, ಧರ್ಮದಲ್ಲಿ ಮುಂಚೂಣಿಯಲ್ಲಿದ್ದು, ಮಾಡುತ್ತಿರುವ ಕೊಡುಗೆಗಳು ಶ್ಲಾಘನೀಯವಾಗಿದೆ ಎಂದರು.


ರಚನಾ ಎ.ಆರ್.ರಚಿಸಿದ ಚಿತ್ರ ಸಮರ್ಪಿಸಿದರು. ಮಂಗಳೂರು ಪ್ರಾಂತ್ಯ ಮಾತೃತ್ವಂನಲ್ಲಿ ಮಾಸದ ಮಾತೆಯರಾಗಿ ಲಕ್ಷ ಭಾಗಿನಿಯರಾಗಿ ಸೇವೆ ಸಲ್ಲಿಸಿದವರಿಗೆ ವಿಶೇಷ ಅನುಗ್ರಹ ನೀಡಿದರು. ಮಿತ್ತೂರು ನರಸಿಂಹ ಭಟ್ ಬರೆದ ಪುಸ್ತಕ ಶ್ರೀ ನಾಗಪ್ರತಿಷ್ಠಾಪನಾ ವಿಽಃ ಬಿಡುಗಡೆ ನಡೆಯಿತು.

ಮಹಾಮಂಡಲ ವಿವಿಧ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಯುವ ವಿಭಾಗ ಪ್ರಧಾನ ಕೇಶವ ಭಟ್ ಮಿಂಚಿನಡ್ಕ, ವೈದಿಕ ವಿಭಾಗ ಪ್ರಧಾನ ಚೂಂತಾರು ಮಹೇಶ್ ಭಟ್, ಮುಷ್ಠಿಭಿಕ್ಷೆ ಪ್ರಧಾನ ಹೇರಂಭ ಶಾಸ್ತಿç, ಮಠದ ಸೇವಾ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಅರವಿಂದ ದರ್ಭೆ, ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು.


ಹಾರಕರೆ ನಾರಾಯಣ ಭಟ್ ಸಭಾ ಪೂಜೆ ನಡೆಸಿ, ಪ್ರಸ್ತಾವನೆಗೈದರು. ಉದಯಶಂಕರ್ ನೀರ್ಪಾಜೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಕೃಷ್ಣ ನೀರಮೂಲೆ, ಜಯದೇವ ಖಂಡಿಗ, ದೇವಿಕಾ ಶಾಸ್ತಿç, ವಿನಾಯಕ ಶಾಸ್ತಿç ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net