ಮಾಣಿ ಡ್ಯಾಂ ಒಂದೇ ದಿನ 2 ಅಡಿ ಏರಿಕೆ

5hos1 p rain
ಸಾಂದರ್ಭಿಕ ಚಿತ್ರ
Published on

ಹೊಸನಗರ: ತಾಲೂಕಿನಾದ್ಯಂತ ಮಳೆ ಬಿರುಸುಗೊಂಡಿದ್ದು ಮಾಣಿ ಜಲಾಶಯದಲ್ಲಿ ಒಂದೇ ದಿನ 2 ಅಡಿ ನೀರಿನ ಏರಿಕೆ ಆಗಿದೆ.

ಹುಲಿಕಲ್ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ 16 ಸೆಂಮೀ ಮಳೆಯಾಗಿದೆ. ಮಾಸ್ತಿಕಟ್ಟೆಯಲ್ಲಿ 15.8 ಸೆಂಮೀ, ಮಾಣಿ ಪ್ರದೇಶದಲ್ಲಿ 15.6 ಸೆಂಮೀ, ಯಡೂರು ಭಾಗದಲ್ಲಿ 12.7 ಸೆಂಮೀ, ಸಾವೇಹಕ್ಲು ಪ್ರದೇಶದಲ್ಲಿ 12 ಸೆಂಮೀ, ಚಕ್ರಾ ಪ್ರದೇಶದಲ್ಲಿ 10.9 ಸೆಂಮೀ ಮಳೆಯಾಗಿದೆ. ಮಾಣಿ ಜಲಾಶಯದ ಗರಿಷ್ಠ ಮಟ್ಟ 594.36 ಮೀಟರ್ ಆಗಿದ್ದು, ಪ್ರಸ್ತುತ 571.46 ಮೀಟರ್ ನೀರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net