

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿನ ಪ್ರಮುಖ ತೋಟಗಾರಿಕೆ ಬೆಳೆಗಳಲ್ಲೊಂದಾದ ಮಾವಿನ ಸಲು ಈ ಬಾರಿ ಉತ್ತಮವಾಗಿರಲಿದೆ ಎಂಬ ನಿರೀಕ್ಷೆ ಇದೆ. ಕಳೆದ ವಾರದಿಂದ ಜಿಲ್ಲೆಯಲ್ಲಿ ಬಿಸಿಲ ತಾಪಮಾನ ಏರಿಕೆಯಾಗುತ್ತಿದ್ದು ಹಣ್ಣಿನ ರಾಜನಿಗೆ ಇದು ವರವಾಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
ಪ್ರತೀ ಬಾರಿ ಹವಾಮಾನ ವೈಪರಿತ್ಯದಿಂದಾಗಿ ಜಿಲ್ಲೆಯಲ್ಲಿ ನಿರೀಕ್ಷೆಯಷ್ಟು ಮಾವಿನ ಸಲು ದಕ್ಕುತ್ತಿಲ್ಲ. ಇದು ಮಾವು ಬೆಳೆಗಾರರನ್ನು ನಿರಾಶೆಗೊಳಿಸುತ್ತಿದೆ. ಸಾಕಷ್ಟು ಜೋಪಾನ ಮಾಡಿದರೂ ಹೂ ಬಿಡುವ ಕಾಲದಲ್ಲಿ ಹವಾಮಾನ ವೈಪರಿತ್ಯ ಎಲ್ಲವನ್ನೂ ತಳೆಗೆಳಗು ಮಾಡುತ್ತಿದೆ. ಆದರೆ ಈ ಬಾರಿ ಉತ್ತಮ ವಾತಾವರಣವಿದ್ದು ಮಾವು ಬೆಳೆಗಾರರು ಉತ್ತಮ ಸಲಿನ ನಿರೀಕ್ಷೆಯಲ್ಲಿದ್ದಾರೆ.
ಮಾವು ಹೂವು ಬಿಡುವ ಕಾಲದಲ್ಲಿ ವಿಪರೀತ ಚಳಿ ವಾತಾವರಣದಿಂದಾಗಿ ನಿರೀಕ್ಷೆಯಂತೆ ಹೂ ಬಾರದೇ ಇರುವುದರದಿಂದ ಮಾವಿನ ಸಲು ಇಳಿಮುಖವಾಗುವ ಆತಂಕ ಎದುರಾಗಿತ್ತು. ಹೂ ಬಿಡುವ ಕಾಲದಲ್ಲಿ ಉತ್ತಮ ತಾಪಮಾನವಿದ್ದರೆ ಉತ್ತಮ ಸಲು ಕಚ್ಚುವ ನಿರೀಕ್ಷೆ ಇರುತ್ತದೆ, ಆದರೆ ತುಂತುರು ಮಳೆ, ಮೋಡ ಮುಸುಕಿದ ಚಳಿಯ ವಾತಾವರಣದಿಂದಾಗಿ ರೈತರಲ್ಲಿ ಆತಂಕ ಎದುರಾಗಿತ್ತು. ಡಿಸೆಂಬರ್ ಅಂತ್ಯದಲ್ಲಿ ಜಿಲ್ಲೆಯ ಒಟ್ಟು ಮಾವಿನ ಸಲಿನಲ್ಲಿ ಶೇ.60 ರಷ್ಟು ನಿರೀಕ್ಷೆ ಇತ್ತು. ಆದರೆ ಇದ್ದಕ್ಕಿದ್ದಂತೆ ವಾತಾವರಣ ಬದಲಾಗಿ ಬಿಸಲಿನ ತಾಪಮಾನ ಕಂಡುಬರುತ್ತಿರುವುದರಿಂದ ನಿರೀಕ್ಷೆಯಷ್ಟು ಸಲು ಕೈಸೇರಲಿದೆ ಎಂಬ ಭರವಸೆ ಮೂಡಿಸಿದೆ.
ನೀರಿನ ಆಸರೆ ಸದ್ಯಕ್ಕಿಲ್ಲ: ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ, ೆಬ್ರವರಿ ಅಂತ್ಯದವರೆಗೆ ಮಾವಿನ ಬೆಳೆಗೆ ಮಳೆ ನೀರಿನ ಅಗತ್ಯವಿಲ್ಲ. ಮರಗಳಲ್ಲಿ ಹೂ ಬಿಟ್ಟು, ಗೋಲಿಯಾಕಾರದ ಕಾಯಿಗಳು ಕಾಣಿಸಿಕೊಳ್ಳತೊಡಗಿದ ಬಳಿಕ ನೀರಿನ ಅವಶ್ಯಕತೆ ಬರುತ್ತದೆ ಮಳೆ ನೀರಲ್ಲದಿದ್ದರೂ ತಕ್ಕಮಟ್ಟಿಗೆ ನೀರಿನ ವ್ಯವಸ್ಥೆ ಮಾಡಿಕೊಂಡತೆ ಉತ್ತಮ ಸಲು ಕೈಸೇರಲಿದೆ ಎಂಬುದು ಮಾವು ಬೆಳೆಗಾರರ ನಿರೀಕ್ಷೆಯಾಗಿದೆ.
70 ಸಾವಿರ ಮೆಟ್ರಿಕ್ ಟನ್: ಜಿಲ್ಲೆಯಲ್ಲಿ ಸುಮಾರು 5871 ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ, ಪ್ರತಿ ವರ್ಷ ಸುಮಾರು 70 ಸಾವಿರ ಮೆಟ್ರಿಕ್ ಟನ್‌ನಷ್ಟು ಮಾವು ಉತ್ಪಾದನೆಯಾಗುತ್ತಿದೆ. ಜಿಲ್ಲೆಯ ಮಾವಿಗೆ ಬೆಂಗಳೂರು ಸೇರಿ ಹೊರ ರಾಜ್ಯಗಳಲ್ಲೂ ಹೆಚ್ಚಿನ ಬೇಡಿಕೆ ಇದೆ.ಮಾವಿನ ಉಪ ಉತ್ಪನ್ನಗಳಿಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮಾವಿನ ವಿಸ್ತೀರ್ಣ ಹೆಚ್ಚುತ್ತಿದೆ, ತೋಟಕಾರಿಕೆ ಇಲಾಖೆಯೂ ರೈತರನ್ನು ಪ್ರೋತ್ಸಾಹಿಸುತ್ತಿದ್ದು ಜಿಲ್ಲೆಯ ರೈತರೂ ಮಾವು ಬೆಳೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ.
ಹೊಸಕೋಟೆ ಮುಂದು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 5871ಹೆಕ್ಟರ್ ಪ್ರದೇಶದಷ್ಟು ಮಾವಿನ ವ್ಯಾಪ್ತಿ ಇದೆ. ದೇವನಹಳ್ಳಿ ತಾಲೂಕಿನಲ್ಲಿ 938 ಹೆಕ್ಟೇರ್, ಹೊಸಕೋಟೆ 2131 ಹೆಕ್ಟೇರ್, ನೆಲಮಂಗಲ 1636 ಹೆಕ್ಟೇರ್ ಹಾಗೂ ದೊಡ್ಡಬಳ್ಳಾಪುರ 1166 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಹೊಸಕೋಟೆ ತಾಲೂಕಿನಲ್ಲಿ ಹೆಚ್ಚು ಮಾವು ಕಂಡುಬರುತ್ತಿದೆ.ಮುಂದಿನ ಎರಡ್ಮೂರು ವಾರದಲ್ಲಿ ಉತ್ತಮ ಬಿಸಿಲು ಬಂದರೆ ವಾತಾವರಣ ಒತ್ತಡ ಹೆಚ್ಚಾಗಿ ಉತ್ತಮ ಸಲು ಕೈ ಸೇರಲಿದೆ. ಇಲ್ಲವಾದರೆ ಕಳೆದ ಕೆಲವು ವರ್ಷಗಳಂತೆ ಈ ಬಾರಿಯೂ ಮಾವಿನ ಸಲಿಗೆ ತೊಂದರೆ ಎದುರಾಗಲಿದೆ ಎಂಬ ಆತಂಕವಿದೆ.
ಮಾರುಕಟ್ಟೆ ಇಲ್ಲ: ಜಿಲ್ಲೆಯಲ್ಲಿ ಮಾರುಕಟ್ಟೆ ಬೇಕು: ರಾಗಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ತೋಟಗಾರಿಕೆ ಬೆಳೆಗಳು ಮುಂಚೂಣಿಗೆ ಬರುತ್ತಿವೆ. ಅದರಲ್ಲೂ ಮಾವು ಬೆಳೆಗೆ ಉತ್ತಮ ಸ್ಪಂದನೆ ಇದೆ. ಹಲವು ರೈತರು ಮಾವು ಬೆಳೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಸೂಕ್ತ ಮಾರುಕಟ್ಟೆ ಇಲ್ಲದೆ ನಿರೀಕ್ಷಿತ ಲಾಭ ಕಾಣಲು ಸಾಧ್ಯವಾಗುತ್ತಿಲ್ಲ ಎಂಬುದು ಜಿಲ್ಲೆಯ ಮಾವು ಬೆಳೆಗಾರರ ಬೇಸರಕ್ಕೆ ಕಾರಣವಾಗಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಮಾವು ಉತ್ತಮ ಸಲಿನ ನಿರೀಕ್ಷೆ ಇದೆ, ವಾತಾವರಣವೂ ಸೂಕ್ತವಾಗಿದ್ದು, ಉತ್ತಮ ಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಮಾವು ಬೆಳೆಗೆ ಸೂಕ್ತ ವಾತಾವರಣ ಕಂಡುಬರುತ್ತದೆ ಎಂಬುದರ ಮೇಲೆ ಸಲಿನ ಲಿತಾಂಶ ನಿರ್ಧಾರವಗಲಿದೆ, ತೋಟಗಾರಿಕೆ ಇಲಾಖೆ ರೈತರಿಗೆ ಮಾವು ಬೆಳೆ ನಿರ್ವಹಣೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ನೀಡುವ ಕಾರ್ಯಾಗಾರಗಳನ್ನು ರೂಪಿಸಿದ್ದೇವೆ.
ಗುಣವಂತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಬೆಂ.ಗ್ರಾಮಾಂತರ