ಶ್ರೀನಿವಾಸಪುರದಲ್ಲಿ ಮಾವು ಮಾರಾಟ ಶುರು

Mango salse start Shrinivasapura market
Published on

ಬೆಳೆಗಾರರಿಗೆ ಕೈಗೆಟಕಿದ ಶೇ.20 ಬೆಳೆ, ರಾಜಗೀರ ಟನ್‌ಗೆ 22-23 ಸಾವಿರ ರೂ. ಧಾರಣೆ

ಶ್ರೀನಿವಾಸಪುರ: ಪ್ರಪಂಚಕ್ಕೆ ಮಾವಿನ ಘಮಲು-ರುಚಿ ನೀಡಿದ ಜಿಲ್ಲೆಯ ಶ್ರೀನಿವಾಸಪುರ ಮಾವು ಹಲವು ಏಳು-ಬೀಳುಗಳ ನಡುವೆ ನಿರೀಕ್ಷೆಯನ್ನು ಹುಸಿಗೊಳಿಸಿ ಶೇ.20ರಷ್ಟು ಮಾರಾಟಕ್ಕೆ ಸಿದ್ಧವಾಗಿದ್ದು, ಸೋಮವಾರ ಶ್ರೀನಿವಾಸಪುರ ಮಾವು ಮಾರುಕಟ್ಟೆಯಲ್ಲಿ ಧಾರಣೆ ಶುರುವಾಯಿತು.

ಬಾದಾಮಿ, ರಾಜಗೀರ್, ಬೇನಿಷಾ, ನೀಲಂ, ತೋತಾಪುರಿ, ಸೇಂದೂರಾ/ರಸಪೂರಿ ಇನ್ನು ಹಲವು ತಳಿಯ ಹಣ್ಣುಗಳು ಮಾರಾಟಕ್ಕೆ ಸಿದ್ಧವಾಗಿದ್ದು, ದೇಶ-ವಿದೇಶಗಳಿಗೆ ರ್ತು ಮಾಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ವರ್ಷ ಗಿಡದಲ್ಲಿ ಹೂವಿನರಾಶಿ ನೋಡಿ ಖುಷಿ ಪಟ್ಟಿದ್ದ ಬೆಳೆಗಾರರ ನಿರೀಕ್ಷೆಯನ್ನು ನಂತರ ಬಿದ್ದ ಗಾಳಿಸಹಿತ ಮಳೆ ಮತ್ತು ನುಸಿರೋಗ ಹಾಗೂ ಕೀಟಬಾಧೆ ಹುಸಿಯಾಗಿಸಿತು. ಆದರೂ, ಹಾಕಿದ ಬಂಡವಾಳ ತೆಗೆದುಕೊಳ್ಳಬೇಕು ಎಂದು ಮೇಲಿಂದ ಮೇಲೆ ಔಷಧ ಸಿಂಪಡಣೆ, ಪ್ರತಿ ಕಾಯಿಗೂ ಪ್ಲಾಸ್ಟಿಕ್ ಕವಚ ಕಟ್ಟುವುದು ಸೇರಿ ಅನೇಕ ರೀತಿಯಲ್ಲಿ ಉಪಚಾರ ಮಾಡಿದರೂ ಸಹ ಅಂತಿಮವಾಗಿ 20ರಷ್ಟು ಬೆಳೆ ಕೈಗೆ ಸಿಕ್ಕಿದೆ.

ಈ ಭಾಗದ ಜನರ ಜೀವನಾಡಿಯಾಗಿರುವ ವಾವು ರೈತರ ಬದುಕನ್ನು ಹಸನಾಗಿಸಿತ್ತು. ಒಂದು ತಿಂಗಳು ತಡವಾಗಿ ಬಂದ ವಾವಿನ ಹೂವು ಯಥೇಚ್ಚವಾಗಿ ಬಂದರೂ ಬಿಸಿಲಿನ ತಾಪ ಹಾಗೂ ಜಿಗಿ ಹುಳುಗಳ ಹಾವಳಿ ಸಂಕಷ್ಟಕ್ಕೀಡು ವಾಡಿತು. 2ವರ್ಷಗಳಿಂದ ಅತಿ ಹೆಚ್ಚು ರೋಗ ರುಜಿನಗಳು ಬರುತ್ತಿದ್ದು, ವಾವು ಬೆಳೆಗಾರರು 4-5 ಬಾರಿ ಔಷಧ ಸಿಂಪಡಣೆ ಮಾಡಿದರೂ ಕೀಟಗಳು ಹತೋಟಿಗೆ ಬಾರದೆ ಖರ್ಚು ಹೆಚ್ಚಾಗಿ ರೈತರು ಸಂಕಷ್ಟದಲ್ಲಿದ್ದಾರೆ.

ವಿಶೇಷ ಪ್ಯಾಕೇಜ್ ಘೋಷಿಸಲಿ: ಎಷ್ಟೇ ಔಷಧೋಪಚಾರ ಮಾಡಿದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದ ದುಸ್ಥಿತಿಯಲ್ಲಿರುವ ಬೆಳೆಗಾರರು ಸಾಲ ಸೋಲಗಳಿಂದ ಹೈರಾಣಾಗಿದ್ದಾರೆ. ಫಸಲನ್ನು ಗುತ್ತಿಗೆ ಪಡೆಯುವ ಸಣ್ಣ ಪುಟ್ಟ ವ್ಯಾಪಾರಸ್ಥರು ಬೆಳೆ ಮೇಲೆ ಬಂಡವಾಳ ಹಾಕಿನಷ್ಟಕ್ಕೀಡಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ, ಸರ್ಕಾರದಿಂದ ಬೆಳೆಗಾರರಿಗೆ ವಿಶೇಷ ಮಾವಿನ ಪ್ಯಾಕೇಜ್ ಘೋಷಿಸುವಂತಾಗಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.ಎಪಿಎಂಸಿ ಕೊರತ: ಇತ್ತೀಚೆಗೆ ಶ್ರೀನಿವಾಸಪುರ ಎಪಿಎಂಸಿಗೆ ಉಪಲೋಕಾಯುಕ್ತ ವೀರಪ್ಪ ತಂಡ ಭೇಟಿ ನೀಡಿದ್ದ ಬೆನ್ನಲ್ಲೇ ಶಾಸಕರ ನೇತೃತ್ವದಲ್ಲಿ ರೈತರ ಹಾಗೂ ಅಧಿಕಾರಿಗಳ ಕುಂದುಕೊರತೆ ಸಭೆ ಹಮ್ಮಿಕೊಳ್ಳಲಾಗಿತ್ತು. ವಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಪ್ರಾರಂಭವಾಗಿದೆ. ಆವರಣದಲ್ಲಿನ ಚರಂಡಿಗಳಲ್ಲಿ ಕಸಕಡ್ಡಿಗಳು ತುಂಬಿ ತುಳುಕುತ್ತಿದ್ದು, ರಸ್ತೆಗಳು ಗುಣಿಗಳಿಂದ ಕೂಡಿವೆ. ಕೆಲಸ ವಾಡಲು ಆಂಧ್ರದಿಂದ ಬಂದಿರುವ ಕೂಲಿಕಾರ್ಮಿಕರಿಗೆ ಸ್ನಾನಗೃಹಗಳು ಸಾಲದೆ ಸಿಮೆಂಟ್ ನೀರಿನ ಟ್ಯಾಂಕ್ ಬಳಿ ಸ್ನಾನ ವಾಡುವಂತಾಗಿದೆ. ಪ್ರತಿವರ್ಷವೂ ಇದು ಮುಂದುವರಿದಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ವ್ಯಾಪಾರಸ್ಥರು, ಕಾರ್ಮಿಕರು ಆಗ್ರಹಿಸಿದ್ದಾರೆ.

ಸೋಮವಾರದಿಂದ ಮಾವು ವಹಿವಾಟು ಪ್ರಾರಂಭವಾಗಿದ್ದು, ಇಂದು ವಾರುಕಟ್ಟೆಗೆ ಬಂದಿರುವ ರಾಜಗೀರ ಹಣ್ಣುಗಳು ಟನ್‌ಗೆ 22 ರಿಂದ 23 ಸಾವಿರ ರೂ. ವಾರಾಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ಜಾತಿ ಹಣ್ಣುಗಳು ಯಾವ ಬೆಲೆಗೆ ವಾರಾಟವಾಗುತ್ತದೆ ಕಾದು ನೋಡಬೇಕಿದೆ. | ಮುಸ್ಸು, ಹಣ್ಣಿನ ಕಂಪನಿ ವಾಲೀಕ ಈಗಾಗಲೇ ಉಪಲೋಕಾಯುಕ್ತ ಹಾಗೂ ಶಾಸಕರು ಭೇಟಿ ನೀಡಿದ್ದು, ಎಪಿಎಂಸಿಯಲ್ಲಿ ಸೌಲಭ್ಯ ಕೊರತೆ ನಿವಾರಣೆಗೆ ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಈ ಸಾಲಿನಲ್ಲಿ ವಾವು ವ್ಯಾಪಾರ ವಹಿವಾಟನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆ ವಾಡಿಕೊಳ್ಳಲಾಗುವುದು. | ಎಂ.ಸುರೇಶ್‌ಕುವಾರ್ ಎಪಿಎಂಸಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net