

ಧಾರವಾಡ: ಗುಣಮಟ್ಟದ ಮಾವಿನ ಹಣ್ಣನ್ನು ಬಳಕೆದಾರರಿಗೆ ನ್ಯಾಯಯುತ ಬೆಲೆಯಲ್ಲಿ ತಲುಪಿಸುವ ಮಾವು ಬೆಳೆಗಾರರ ಬಳಗದ ಪ್ರಯತ್ನ ಶ್ಲಾಘನೀಯ ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಡಿ.ಪಿ. ಬಿರಾದಾರ ಹೇಳಿದರು.
ಧಾರವಾಡದ ಮಾವು ಬೆಳೆಗಾರರ ಬಳಗದಿಂದ ನಗರದ ಗಾಂಽ ಶಾಂತಿ ಪ್ರತಿಷ್ಠಾನದಲ್ಲಿ ಆಯೋಜಿಸಿರುವ ಮಾವು ಮಾರಾಟ ಮೇಳಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮಾವು ಮಾರಾಟ ಮೇಳ ಸಂಘಟನೆಯಿAದ ಮಾತ್ರ ಸಾಧ್ಯ. ಇದು ಬೆಳೆಗಾರರ ಸಂಘಟನೆಯಾಗದೆ ಬೆಳೆಗಾರ- ಬಳಕೆದಾರ ಸಂಘಟನೆಯಾಗಬೇಕು. ಮಾವು ಅಭಿವೃದ್ಧಿಗೆ ಸಂಘಟನೆಯನ್ನು ಬಲಪಡಿಸುವ ಅವಕಾಶಗಳಿದ್ದು, ಅಗತ್ಯ ಸಹಕಾರ ನೀಡಲಾಗುವುದು ಎಂದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶÀಕ ಕಾಶಿನಾಥ ಭದ್ರನ್ನವರ ಮಾತನಾಡಿ, ಬಳಗಕ್ಕೆ ಇಲಾಖೆಯಿಂದ ಸಹಕಾರ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಇಲಾಖೆಯಿಂದ ಆಯೋಜಿಸಿರುವ ಮಾವು ಮೇಳದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಂಭಾಪೂರ ಕೇಂದ್ರದ ಮುಖ್ಯಸ್ಥ ಡಾ. ಲಕ್ಷ÷್ಮ್ಮ್ಮಣ ಕುಕನೂರ ಮಾತನಾಡಿ, ಬಳಗದ ತಾಂತ್ರಿಕ ಮಾಹಿತಿ ಕೊರತೆಯನ್ನು ನೀಗಿಸಲಾಗುತ್ತಿದೆ ಎಂದರು.
ಡಾ. ರಾಜೇಂದ್ರ ಪೋದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಬಳಗದಿಂದ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಾರಾಟಕ್ಕೆ ಒತ್ತು ನೀಡಿ ನೇರ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಉತ್ಪಾದಕ ಮತ್ತು ಗ್ರಾಹಕ ಇಬ್ಬರಿಗೂ ಲಾಭ ಎಂದರು.
ಬಳಗದ ಮುಖಂಡ ಸುಭಾಷ ಆಕಳವಾಡಿ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಕುಲಕರ್ಣಿ ನಿರೂಪಿದರು. ಗಂಗಾಧರ ಹೊಸಮನಿ ಸ್ವಾಗತಿಸಿದರು. ಶಿವು ಅಮೀನಗಡ ವಂದಿಸಿದರು.
ವಿಜ್ಞಾನಿಗಳು, ರೈತರು, ಗ್ರಾಹಕರು ಭಾಗವಹಿಸಿದ್ದರು. ಪ್ರಮೋದ ಗಾವಕರ ಅವರ ತೋಟದಲ್ಲಿ ಬೆಳೆದ ವಿಶಿಷ್ಟ ಮಿಯಾಝಾಕಿ ಮಾವು ಸೇರಿ ೪೫ ವಿವಿಧ ತಳಿಗಳು ಮಾವುಪ್ರಿಯರ ಗಮನ ಸೆಳೆದವು.