

ಕೋಲಾರ: ಹವಾವಾನ ವೈಪರೀತ್ಯವು ಮಾವು ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದರಿಂದ ಜಿಲ್ಲೆಯ ಮಾವು ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
ಈ ಬಾರಿಯಾದರೂ ಉತ್ತಮ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಸಲಿಗೆ ಮುನ್ನ ಮಾವಿನ ಮರಗಳಲ್ಲಿ ಚಿಗುರಿನೊಂದಿಗೆ ಅಕಾಲಿಕ ಹೂವು, ಕೀಟ ಹಾಗೂ ರೋಗಬಾಧೆ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ.
ಪ್ರತೀ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಚಿಗುರು ಕಾಣಿಸಿಕೊಂಡು, ಡಿಸೆಂಬರ್, ಜನವರಿಯಲ್ಲಿ ಹೂವು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಅಕ್ಟೋಬರ್‌ನಲ್ಲೇ ಚಿಗುರು ಕಾಣಿಸಿಕೊಳ್ಳುವುದರ ಜತೆಗೆ, ಅಕಾಲಿಕ ಹೂವು ಕಾಣಿಸಿಕೊಳ್ಳತೊಡಗಿದೆ. ಹೀಗೆ ಕಾಣಿಸಿಕೊಳ್ಳುವ ಹೂವಿನಲ್ಲಿ ಶೇ.10 ವಾತ್ರ ಋತುವಿಗೆ ಬರುವುದಿಲ್ಲ. ಜತೆಗೆ ಚಿಗುರಿಗೆ ಜಿಗಿಹುಳು ಕಾಟ ಆರಂಭವಾಗಿದ್ದು ಇದು ಚಿಗುರನ್ನು ನಾಶ ವಾಡುವುದರ ಜತೆಗೆ ಚಿಗುರಿನ ಕೊಂಡಿಯನ್ನು ಕತ್ತರಿಸುತ್ತದೆ. ಎಲೆ ತಿನ್ನುವುದರೊಂದಿಗೆ ಹೂ ಬಿಟ್ಟಲ್ಲಿ ಹೂ ತೆನೆಯ ಬುಡ ಕತ್ತರಿಸುತ್ತದೆ. ನುಸಿ ರೋಗ, ಬೂದಿ ರೋಗ ತರುವ ಹಲವು ಕೀಟಗಳ ಉತ್ಪತ್ತಿಗೆ ಕಾರಣವಾಗುತ್ತಿದೆ.
ರೈತರು ಆರಂಭದಲ್ಲಿ ಇದನ್ನು ಹತೋಟಿಗೆ ತಂದುಕೊಂಡರೆ ಫಸಲು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆ ರೈತರಿಗೆ ಪ್ರಾರಂಭದಲ್ಲಿ ಕಾರ್ಯಾಗಾರ ನಡೆಸುವ ಮೂಲಕ ಎಚ್ಚರಿಸಬೇಕಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಹೀಗೆ ಮುಂದುವರಿದರೆ ಈ ಬಾರಿ ಮಾವು ಫಸಲಿಗೆ ಧಕ್ಕೆಯಾಗಲಿದೆ ಎಂಬುದು ರೈತರ ಆತಂಕ.
ಜಿಗಿಹುಳು ಹಾಗೂ ಮತ್ತಿತರ ಕೀಟಗಳನ್ನು ನಾಶ ವಾಡಲು ಇಲಾಖೆ ಅಧಿಕಾರಿಗಳ ಸಲಹೆ ಪಡೆದು, ಚಿಗುರಿಗೆ ಔಷಧ ಸಿಂಪಡಿಸಬೇಕು. ಜಿಗಿಹುಳ ಭೂಮಿಯಲ್ಲಿದ್ದು, ಚಿಗುರು ಬಂದಾಗ ಅದನ್ನು ತಿನ್ನುತ್ತದೆ. ಈ ಬಗ್ಗೆ ರೈತರಿಗೆ ತಿಳಿವಳಿಕೆ ಮೂಡಿಸಲಾಗಿದೆ. ತೇವಾಂಶ ಕಡಿಮೆ ವಾಡಲು ವಾವಿನ ತೋಟಗಳಲ್ಲಿ ಉಳುಮೆ ವಾಡಬೇಕು. ಆಗ ತೇವಾಂಶ ಆವಿಯಾಗಿ ಹೊರಹೋಗುತ್ತದೆ. ಡಿಸೆಂಬರ್, ಜನವರಿಯಲ್ಲಿ ಉಷ್ಣಾಂಶ ಹೆಚ್ಚಾಗಿದ್ದರೆ ಹೂವು ಹೆಚ್ಚಾಗಿ ಬರಲು ಸಾಧ್ಯವಾಗುತ್ತದೆ.
ಎಂ. ಶ್ರೀನಿವಾಸ್, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ಅಕಾಲಿಕ ಹೂವಿನಿಂದ ರೈತರು ಆತಂಕ ಪಡಬೇಕಿಲ್ಲ. ಕಡಿಮೆ ಪ್ರವಾಣದಲ್ಲಿ ಹೂವು ಕಾಣಿಸಿಕೊಳ್ಳುತ್ತದೆ. ಚಿಗುರಿಗೆ ಜಿಗಿ ಹುಳು ಬೀಳದಂತೆ ಈಗಿನಿಂದಲೇ ಔಷಧ ಸಿಂಪಡಿಸಿ. ಅಕ್ಟೋಬರ್‌ನಿಂದ ಡಿಸೆಂಬರ್ ಮೊದಲನೇ ವಾರದವರೆಗೆ ಮರಗಳಲ್ಲಿ ಚಿಗುರು ಕಾಣಿಸಿಕೊಳ್ಳುತ್ತದೆ. ಡಿಸೆಂಬರ್ ಕೊನೆಯ ವಾರದಿಂದ ಹೂ ಬಿಡಲು ಪ್ರಾರಂಭವಾಗುತ್ತದೆ. ಆಗ ಉಷ್ಣಾಂಶ ಕಡಿಮೆಯಾದರೆ ಮಾವಿನ ಹೂ ಕಡಿಮೆಯಾಗುತ್ತದೆ. ಈಗಾಗಲೇ ಮಾವಿನ ತೋಟಗಳಲ್ಲಿ ತೇವಾಂಶ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೀಗೆ ಮುಂದುವರಿದರೆ ಈ ಬಾರಿಯ ಮಾವಿನ ಫಸಲಿನ ಮೇಲೆ ದುಷ್ಪರಿಣಾಮ ಬೀರಲಿದೆ.
ಚಿನ್ನಪ್ಪ ರೆಡ್ಡಿ, ಮಾವಿನ ಬೆಳೆಗಾರರ ಜಿಲ್ಲಾಧ್ಯಕ್ಷ