ಗಮನ ಸೆಳೆಯುತ್ತಿದೆ ಮಾವು ಮೇಳ

14 vikram 12
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ತೋಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮಂಗಳವಾರ ಚಾಲನೆ ನೀಡಿದ್ದು, ಜನರ ಗಮನ ಸೆಳೆಯುತ್ತಿದೆ.
ರೈತರಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ಮಾವು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಮೇಳ ಏರ್ಪಡಿಸಲಾಗಿದೆ. ಮೇಳದಲ್ಲಿ 32ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದಿದ್ದು, ವಿವಿಧ ತಳಿಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ತಾಲೂಕಿನ ಜೋಗೆಲ್ಲಾಪುರ, ಮುರಕಟ್ಟಿ, ಕೆಲಗೇರಿ ಹಾಗೂ ಸುತ್ತಲಿನ ಗ್ರಾಮಗಳ ಮಾವು ಬೆಳೆಗಾರರು ಮೇಳದಲ್ಲಿ ಭಾಗವಹಿಸಿದ್ದಾರೆ. ಮೇಳದಲ್ಲಿ ಆರ್ಕಾ ಕೇಸರಿ, ಧಾರವಾಡ ರಸಪೂರಿ, ಖಾದರ್​, ತೋತಾಪುರಿ, ಕೇಸರ, ಆಪೂಸ್​, ರಸಪೂರಿ, ದಸೇರಿ, ಬೆನೆಶಾನ, ಸಿಂಧುರಿ, ಮಲ್ಲಿಕಾ, ರತ್ನಗಿರಿ ಆಲ್ಫೆನ್ಸೊ, ಕಲ್ಮಿ ಸೇರಿ ನೂರಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣುಗಳು ಮತ್ತು ಹಲವು ಬಗೆಯ ಉಪ್ಪಿನಕಾಯಿ ಮಾವಿನಕಾಯಿಗಳೂ ಇವೆ.
ಮೇಳದ ಉದ್ಘಾಟನೆ ಬಳಿಕ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಜಿಲ್ಲೆಯಾದ್ಯಂತ 8 ಸಾವಿರ ಎಕರೆ ಮಾವು ಬೆಳೆಯಲಾಗುತ್ತಿದ್ದು, ಜನರಿಗೆ ಹಾಗೂ ಗ್ರಾಹಕರಿಕೆಗೆ ಗುಣಮಟ್ಟದ ಮಾವು ನೀಡುವ ಉದ್ದೇಶದಿಂದ ಮಾವು ಮೇಳೆ ಆಯೋಜಿಸಲಾಗಿದೆ. 20 ರಿಂದ 30 ಟನ್​ ಮಾವು ಮಾರಾಟವಾಗುವ ನಿರೀೆ ಇದೆ ಎಂದರು. ಮಾವು ಬೆಳೆಗಾರ ಪ್ರಮೋದ ಗಾಂವಕರ, ರಾಮನಗೌಡ ಪಾಟೀಲ, ಸಹಾಯಕ ನಿರ್ದೇಶಕ ಇಮ್​ತಾಜ್​ ಚಂದಾಪುರ, ಇಲಾಖೆಯ ವಿವಿಧ ಅಧಿಕಾರಿಗಳು, ರೈತರು ಇದ್ದರು.
ಗಮನ ಸೆಳೆದ ಮಾವು: ಸ್ಥಳಿಯವಾಗಿ ಬೆಳೆಯುವ ವಿವಿಧ ತಳಿಗಳ ಮಾವಿನ ಹಣ್ಣಿನ ಮಧ್ಯೆ ಜಪಾನ್​ನಿಂದ ಆಗಮಿಸಿದ್ದ ಮಾವು ಜನರ ಗಮನೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಜಪಾನ್​ನ ಮೀಯಾ ಜಾಕಿ ಹಣ್ಣು, ರುಚಿಗಿಂತಲೂ ಹೆಚ್ಚಾಗಿ ಬೆಲೆಯಿಂದಲೇ ಜನರ ಗಮನ ಸೆಳೆಯಿತು. ಜಗತ್ತಿನ ದುಬಾರಿ ಮಾವಿನ ತಳಿಗಳಲ್ಲಿ ಒಂದಾದ ಮೀಯಾ ಜಾಕಿ, ಸಾಧಾರಣ ರುಚಿ, ಗುಣಮಟ್ಟ ಮತ್ತು ವಿಶಿಷ್ಟ ಗುಣಲಣಗಳಿಂದ ಹೆಸರಾಗಿದೆ. ಈ ಹಣ್ಣಿನ ಬೆಲೆ ಕೆಜಿಗೆ 2.70 ಲಕ್ಷ ರೂ. ಕಲಕೇರಿ ಮಾವು ಬೆಳೆಗಾರ ಪ್ರಮೋದ ಗಾಂವಕರ ತೋಟದಲ್ಲಿ ಈ ದುಬಾರಿ ಮಾವು ಬೆಳೆಯಲಾಗಿದೆ. ಮೊದಲ ಬಾರಿಗೆ ಮೇಳದಲ್ಲಿ ಈ ತಳಿಯನ್ನು ಪ್ರದರ್ಶನಕ್ಕಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net