

ಎನ್.ಮುನಿವೆಂಕಟೇಗೌಡ: ವಾರ್ಷಿಕ ಬೆಳೆಗಳ ಫಸಲನ್ನು ನಿಗದಿತ ಋತುಮಾನದ ಬದಲು ಯಾವ ಕಾಲದಲ್ಲಾದರೂ ಪಡೆಯಬಹುದು ಎಂಬುದನ್ನು ಶ್ರೀನಿವಾಸಪುರ ತಾಲೂಕಿನ ಪ್ರಗತಿಪರ ರೈತ ಡಾ. ರಾಜಾರೆಡ್ಡಿ ಸಾಧಿಸಿ ತೋರಿಸಿದ್ದಾರೆ. ಸುಗ್ಗಿ ಬಿಟ್ಟು ಈ ಮಳೆಗಾಲದಲ್ಲೂ ಮಾವಿನ ಫಸಲನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು. ದಿಗುವಪಲ್ಲಿ ಗ್ರಾಮದ ಡಾ. ರಾಜಾರೆಡ್ಡಿ ತೋಟದಲ್ಲಿ 100 ಮಾವಿನ ಗಿಡಗಳು ಹೂ ಬಿಟ್ಟಿವೆ. ಮಾತ್ರವಲ್ಲ, ಸದ್ಯ ಗೋಲಿ ಗಾತ್ರದ ಕಾಯಿಗಳೂ ಆಗಿವೆ. ಈ ಹಿಂದೆ ಸುಗ್ಗಿ ಕಾಲದಲ್ಲಿ ಈ ಮರಗಳು ಹೂವು ಬಿಟ್ಟಿರಲಿಲ್ಲ. ಅಂಥ ಎಲ್ಲ ಮರಗಳಲ್ಲಿ ಫಸಲಿನ ಅವಧಿ ಮುಗಿದ ನಂತರ ಅಕಾಲಿಕವಾಗಿ ಹೂವು ಅಳಿರ ಕಾಯಿಯಾಗಿವೆ.
ಈ ಮೊದಲು ಇದೇ ರೀತಿಯ ಅನುಭವ ಪಡೆದಿದ್ದ ರೈತ ಸುಗ್ಗಿಯ ಕಾಲಕ್ಕೆ ಹೂವು ಬಿಡುವುದಿಲ್ಲ ಎಂದು ಹಿಡಿಗಾತ್ರದ ಕಾಯಿಗಳನ್ನು ಕಿತ್ತು ಉಪ್ಪಿನಕಾಯಿಗೆ ಮಾರಾಟ ಮಾಡುತ್ತಿದ್ದ. ಕೆಲವು ಮರ ಹೂವು ಬಿಟ್ಟರೂ ನಂತರ ನಾಶಪಡಿಸುತ್ತಿದ್ದರು.
ಹೊಸ ಪ್ರಯೋಗ: ಡಾ.ರಾಜಾರೆಡ್ಡಿ ಅವರ ತೋಟದಲ್ಲಿ ಸುಗ್ಗಿಯ ಕಾಲದಲ್ಲಿ ಹೂವು ಬಿಡದೆ ಇದ್ದ ಗಿಡಗಳಿಗೆ ಮಾರ್ಚ್ನಲ್ಲಿ ಉಳುಮೆ ಮಾಡಿ, ಆರೈಕೆ ಮಾಡಿದ್ದರು. ಪರಿಣಾಮವಾಗಿ ಆ ಗಿಡಗಳು ಈಗ ಹೂವು ಬಿಟ್ಟು ಗೋಲಿ ಗಾತ್ರದ ಕಾಯಿಗಳಾಗಿವೆ. ಸುಮಾುರ 50 ಎಕೆರಯಷ್ಟು ಇರುವ ತೋಟದಲ್ಲಿ 100 ಗಿಡಗಳಲ್ಲಿ ಹೂವು ಕಾಣಿಸಿಕೊಂಡಿರಲಿಲ್ಲ. ಆ ಗಿಡಗಳ ಮಧ್ಯೆ ಉಳುಮೆ ಮಾಡಿಸಿದ್ದರು. ಆಗಸ್ಟ್ ಕೊನೇ ವಾರದಲ್ಲಿ ಹೂವು ಕಾಣಿಸಿಕೊಂಡು ಈಗ ಗೋಲಿ ಗಾತ್ರದ ಕಾಯಿ ಆಗಿವೆ. ನವೆಂಬರ್ನಲ್ಲಿ ಪೂರ್ತಿ ಫಸಲು ಬುರತ್ತದೆ. ಈ ಕಾಲದಲ್ಲಿ ಕಾಯಿ ಹಣ್ಣು ಆಗಬಹುದು. ಆದೆರ ಹಣ್ಣು ಕೊಳ್ಳುವವರು ಕಡಿಮೆ ಇುರವುದರಿಂದ ಉಪ್ಪಿನಕಾಯಿಗೆ ಮಾರಾಟ ಮಾಡಲಾಗುವುದು ಎನ್ನುತ್ತಾರೆ ಡಾ.ರಾಜಾರೆಡ್ಡಿ.
ಸುಗ್ಗಿಯಲ್ಲಿ ಹೂವು ಮತ್ತು ಕಾಯಿ ಬಿಟ್ಟಿದ್ದ ಮರಗಳ ಮಧ್ಯೆಯೂ ಬೇಗನೆ ಉಳುಮೆ ಮಾಡಿರುವ ಕಾರಣ ನವೆಂಬರ್ನಲ್ಲಿ ಎಲ್ಲ ಮರಗಳಲ್ಲಿ ಹೂವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪ್ರತಿವರ್ಷ ಏಪ್ರಿಲ್ ಕೊನೇ ವಾರ ಮತ್ತು ಮೇನಲ್ಲಿ ಫಸಲು ಮಾರುಕಟ್ಟೆಗೆ ಬರುತ್ತದೆ. ನಮ್ಮ ತೋಟದಲ್ಲಿ ಬೇಗನೆ ಉಳುಮೆ ಮಾಡಿರುವ ಕಾರಣ ಮಾರ್ಚ್ನಲ್ಲೇ ಫಸಲು ಬರುವ ನಿರೀಕ್ಷೆ ಇದೆ. ಒಂದು ತಿಂಗಳು ಮುಂಚಿತವಾಗಿ ಫಸಲು ಬಂದೆರ ಉತ್ತಮ ಬೆಲೆ ಬರುವ ನಿರೀಕ್ಷೆ ಇದೆ. ಈ ಬಾರಿ ಪರೀಕ್ಷೆ ಮಾಡುವ ಸಲುವಾಗಿ 20 ಎಕೆರಯಲ್ಲಿ ಫಸಲು ತೆಗೆಯಬಹುದಾಗಿದೆ ಎನ್ನುತ್ತಾರೆ ಡಾ.ರಾಜಾರೆಡ್ಡಿ.
ಸುಗ್ಗಿಯ ಕಾಲಕ್ಕೆ 100ಕ್ಕೂ ಹೆಚ್ಚು ಗಿಡಗಳಲ್ಲಿ ಹೂವು ಬಿಡಲಿಲ್ಲ. ಮಾರ್ಚ್ನಲ್ಲಿ ಗಿಡಗಳ ಕೆಳಗೆ ಉಳುಮೆ ಮಾಡಲಾಯಿತು. ಆಗಸ್ಟ್ನಲ್ಲಿ ಹೂವು ಕಾಣಿಸಿಕೊಂಡಿದೆ. ಹೂವು ಕಾಣಿಸಿಕೊಂಡ ನಂತರ 10 ದಿನಗಳಿಗೊಮ್ಮೆ ಔಷಧ ಸಿಂಪಡಿಸಿ ಕೀಟಬಾಧೆಗಳಿಂದ ರಕ್ಷಿಸಿಕೊಳ್ಳಲಾಗಿದೆ. ಕಾಯಿ ಕಾಣಿಸಿಕೊಂಡ ನಂತರ ಕಾಯಿ ಬೆಳವಣಿಗೆಗೂ ಔಷಧ ಹೊಡೆಯಲಾಗುತ್ತದೆ. ತೋತಾಪುರಿ ತಳಿಗೆ ಮಾತ್ರ ಹೂವು ತರಿಸಲು ಮುಂದಾಗಿದ್ದು, ಈಗ ಚಿಕ್ಕದಾಗಿ ಕಾಯಿ ಬಂದಿದೆ. ತೋತಾಪುರಿ ಉಪ್ಪಿನಕಾಯಿಗೆ ಮತ್ತು ಹಸಿಕಾಯಿಗೆ ಬೇಡಿಕೆ ಇದೆ. ಡಾ.ರಾಜಾರೆಡ್ಡಿಪ್ರಗತಿಪರ ಮಾವು ಬೆಳೆಗಾರರುಕೆಲವೊಂದು ಮಾವಿನ ಮರಗಳು ಸುಗ್ಗಿಯಲ್ಲಿ ಹೂವು ಬಿಡದೆ ಅಕಾಲಿಕವಾಗಿ ಸುಗ್ಗಿ ಮುಗಿದ ನಂತರ ಹೂವು ಬಿಡುತ್ತದೆ. ಅವು ಸರಿಯಾಗಿ ಕಾಯಿ ಆಗುವುದಿಲ್ಲ. ಕಾಯಿ ಆದರೂ ಹಣ್ಣು ಆಗುವುದಿಲ್ಲ. ರಾಜಾರೆಡ್ಡಿ ಅವರ ತೋಟದಲ್ಲಿ 100 ಮರಗಳಲ್ಲಿ ಹೂವು ತರಿಸಿುರವುದು ಯಾವ ರೀತಿ ಎಂದು ಪರಿಶೀಲಿಸಲಾಗುವುದು. ಕುಮಾಸ್ವಾರಮಿಉಪನಿರ್ದೇಶಕ, ತೋಟಗಾರಿಕೆ ಇಲಾಖೆ