ರೋಗಭಾಧೆಗಳಿಲ್ಲದ ಮಾವಿನ ಸಲು

mang
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಇನ್ನೇನು ಮಾರುಕಟ್ಟೆಗಳಿಗೆ ಹಣ್ಣಿನ ರಾಜನ ಆಗಮನವಾಗಲಿದೆ, ತರಹೇವಾರಿ ಮಾವಿನ ಹಣ್ಣುಗಳು ಗ್ರಾಹಕರನ್ನು ಕೈಬೀಸಿ ಕರೆಯಲಿವೆ. ಜಿಲ್ಲೆಯಲ್ಲಿನ ಸುಮಾರು 5871ಹೆಕ್ಟೇರ್ ಪ್ರದೇಶದಲ್ಲಿನ ಮಾವಿನ ಸಲು ಮೇ ಆರಂಭದಿಂದ ಮಾರುಕಟ್ಟೆ ಪ್ರವೇಶಿಸಲಿವೆ. ಮುಖ್ಯವಾಗಿ ಹಲವು ರೋಗಬಾಧೆಗಳಿಂದ ಮುಕ್ತಗೊಂಡಿರುವ ಮಾವಿನ ಸಲು ಈ ಬಾರಿ ಬೆಳೆಗಾರರ ಸಂತಸಕ್ಕೂ ಕಾರಣವಾಗಿದೆ.

ಶಿಲೀಂಧ್ರ ರೋಗಬಾಧೆ, ಜಿಗಿಹುಳದ ಕಾಟ, ಹೂತೆನೆ ಕುಡಿ ಕೊರಕ, ಥ್ರ್ಸಿ ನುಸಿ, ಹಿಟ್ಟು ತಿಗಣೆ, ಓಟೆ ಕೊರಕ, ಹೂತೆನೆ ಕಪ್ಪಾಗುವ ರೋಗ, ಬೂದಿ ರೋಗ, ಕಾಡಿಗೆ ರೋಗ, ಎಲೆಚಿಬ್ಬು ರೋಗ ಸೇರಿ ಹತ್ತು ಹಲವು ಬಗೆಯಲ್ಲಿ ಮಾವಿನ ಸಲನ್ನು ಕಾಡುತ್ತಿದ್ದ ರೋಗಗಳು ಈ ಭಾರಿ ಹೆಚ್ಚು ಹಾನಿ ಮಾಡಿಲ್ಲ, ಹೀಗಾಗಿ ಒಳ್ಳೆ ಗಾತ್ರದ ಉತ್ತಮ ಮಾವಿನ ಸಲು ಮಾರುಕಟ್ಟೆ ಪ್ರವೇಶಿಸಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ ಉತ್ತಮ ಇಳುವರಿ ಬರುವ ನಿರೀಕ್ಷೆ ಮೂಡಿಸಿದೆ. ವಾರ್ಷಿಕ ಸರಾಸರಿ 22 ಸಾವಿರ ಮೆಟ್ರಿಕ್ ಟನ್ ಇಳುವರಿ ಬರುತ್ತಿದ್ದು ಈ ಬಾರಿ ಈ ಇಳುವರಿ ಮತ್ತಷ್ಟು ಹೆಚ್ಚಲಿದೆ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಮೂರ‌್ನಾಲ್ಕು ವರ್ಷಕ್ಕೆ ಹೋಲಿಸಿದರೆ ಸುಮಾರು 600 ಹೆಕ್ಟೇರ್ ಪ್ರದೇಶಕ್ಕೆ ಮಾವಿನ ಬೆಳೆ ವಿಸ್ತರಣೆಗೊಂಡಿದ್ದು, ಹೆಚ್ಚಿನ ಮಟ್ಟದಲ್ಲಿ ಮಾವಿನ ಸಲು ಕೈಗೆಟುಕಲಿದೆ.

ಕಾರ್ಯಾಗಾರದ ನೆರವು: ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಮಾವು ಬೆಳೆ ವಿಸ್ತರಣೆಗೆ ಆಸಕ್ತಿ ತೋರಿಸುತ್ತಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಮಾವು ಬೆಳೆಗಾರರಿಗೆ ನಿರಂತರ ಕಾರ್ಯಾಗಾರ, ತರಬೇತಿ ಶಿಬಿರಗಳನ್ನು ನಡೆಸಿಕೊಂಡು ಬಂದಿದೆ. ಏತನ್ಮಧ್ಯೆ ಮಾವಿನ ಇಳುವರಿ ರಕ್ಷಣೆಗೆ ಮಾವು ಬೆಳೆಗಾರರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಇರುವ ಕೈಪಿಡಿ ಬಿಡುಗಡೆ ಮಾಡಿದ್ದು, ಜಿಲ್ಲೆಯ ನಾಲ್ಕೂ ತಾಲೂಕುಗಳ ಬೆಳೆಗಾರರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇದರ ಪರಿಣಾಮವಾಗಿ ಬೆಳೆಗಾರರು ಸಹ ಮಾವಿನ ಬೆಳೆಯ ರಕ್ಷಣೆಗೆ ಕ್ರಮಕೈಗೊಳ್ಳುತ್ತಿದ್ದ ಹಣ್ಣಿನ ರಾಜ ರೋಗಬಾಧೆಗಳಿಂದ ದೂರವಾಗುತ್ತಿದ್ದಾನೆ.

ಆಲಿಕಲ್ಲು ಬಿದ್ದರೆ ಅಪಾಯ: ಮರಗಳಲ್ಲಿ ಹೂ ಬಿಟ್ಟು, ಗೋಲಿಯಾಕಾರದ ಕಾಯಿಗಳು ಕಾಣಿಸಿಕೊಳ್ಳತೊಡಗಿದ ಬಳಿಕ ನೀರಿನ ಅವಶ್ಯಕತೆ ಬರುತ್ತದೆ ಮಳೆ ನೀರಲ್ಲದಿದ್ದರೂ ತಕ್ಕಮಟ್ಟಿಗೆ ನೀರಿನ ವ್ಯವಸ್ಥೆ ಮಾಡಿಕೊಂಡರೆ ಉತ್ತಮ ಸಲು ಕೈಸೇರಲಿದೆ ಇದರ ಹೊರತಾಗಿಯೂ ಮೊನ್ನೆ ಸುರಿದ ಮಳೆಯಿಂದ ಮಾವಿನ ಲಸು ಮತ್ತಷ್ಟು ಚೇತರಿಗೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿನ ಮಳೆಯೂ ಸಹಕಾರಿಯಾಗಲಿದೆ. ಆದರೆ ಆಲಿಕಲ್ಲು ಮಳೆ ಸುರಿದರೆ ಸಲಿಗೆ ತೀವ್ರ ಪೆಟ್ಟು ಬೀಳಲಿದೆ ಎಂಬ ಅತಂಕವೂ ಇದೆ.

ಬಾಧಿಸಿದ್ದ ಶಿಲೀಂದ್ರ ಶತ್ರು: ಕಳೆದ ಬಾರಿ ಹೊಸಕೋಟೆ ತಾಲೂಕಿನ ಪ್ರಮುಖ ತೋಟಗಾರಿಗೆ ಬೆಳೆಯಾಗಿರುವ ಮಾವಿಗೆ ಶಿಲೀಂದ್ರ ರೋಗಬಾಧೆ ಎದುರಾಗಿತ್ತು. ತಾಲೂಕಿನಲ್ಲಿ 3200 ಹೆಕ್ಟರ್‌ಗೂ ಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ರೋಗಬಾಧೆಯಿಂದ ಮಾವಿನ ಸಲಿನಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. ಮಾವು ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಹವಾಮಾನ ವೈಪರಿತ್ಯದಿಂದ ಸಾಕಷ್ಟು ಸಲು ತೋಟದಲ್ಲಿಯೇ ಕೊಳೆತುಹೋಗಿತ್ತು. ಆದರೆ ಈ ಬಾರಿ ಇಂಥ ಸಮಸ್ಯೆ ಇಲ್ಲದಿರುವುದು ಆ ಭಾಗದ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.

ಹೊಸಕೋಟೆ ಮುಂದು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 5871ಹೆಕ್ಟರ್ ಪ್ರದೇಶದಷ್ಟು ಮಾವಿನ ವ್ಯಾಪ್ತಿ ಇದೆ. ದೇವನಹಳ್ಳಿ ತಾಲೂಕಿನಲ್ಲಿ 938 ಹೆಕ್ಟೇರ್, ಹೊಸಕೋಟೆ 2131 ಹೆಕ್ಟೇರ್, ನೆಲಮಂಗಲ 1636 ಹೆಕ್ಟೇರ್ ಹಾಗೂ ದೊಡ್ಡಬಳ್ಳಾಪುರ 1166 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಹೊಸಕೋಟೆ ತಾಲೂಕಿನಲ್ಲಿ ಹೆಚ್ಚು ಮಾವು ಕಂಡುಬರುತ್ತಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಾವಿನ ಸಲು ಬರುವ ನಿರೀಕ್ಷೆ ದಟ್ಟವಾಗಿದೆ, ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಕೀಟ ಬಾಧೆಗಳು ಹೆಚ್ಚು ಕಾಡಿಲ್ಲ. ವಾತಾವರಣವೂ ಸೂಕ್ತವಾಗಿದ್ದು, ಉತ್ತಮ ಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ತೋಟಗಾರಿಕೆ ಇಲಾಖೆ ರೈತರಿಗೆ ಮಾವು ಬೆಳೆ ನಿರ್ವಹಣೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ನೀಡುವ ಕಾರ್ಯಾಗಾರಗಳನ್ನು ರೂಪಿಸಿದ್ದೇವೆ.

ಗುಣವಂತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net