ಮಾವು ಬೆಳೆಯ ಕುರಿತು ವಿಜ್ಞಾನಿಗಳೊಂದಿಗೆ ರೈತರ ಚರ್ಚೆ

Published on


ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಶ್ವ ವಿದ್ಯಾಲಯ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಕೃಷಿ ವಿಶ್ವ ವಿದ್ಯಾಲಯ (ಜಿಕೆವಿಕೆ), ಬೆಂಗಳೂರಿನ ವಿಜ್ಞಾನಿಗಳು ಹಾಗೂ ಜಿಲ್ಲೆಯ ಮಾವು ಬೆಳೆಗಾರರ ವಿಚಾರ-ವಿಮರ್ಶೆ ಸಭೆ ಏರ್ಪಡಿಸಲಾಯಿತು.
ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರು ಡಾ.ಲಕ್ಷö್ಮಣ ಕುಕನೂರ ಮಾತನಾಡಿ, ಗದಗ ಜಿಲ್ಲೆಯಲ್ಲಿ ಸುಮಾರು ೩೨೦೦ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಮಾವು ಬೆಳೆಗಾರರು ಉತ್ತಮ ಲಾಭವನ್ನು ಪಡೆದಿರುವರು. ಆದರೆ ಕಳೆದ ೩-೪ ವರ್ಷಗಳಿಂದ ಗದಗ ಜಿಲ್ಲೆಯಲ್ಲಿ ಮಾವು ಉತ್ಪಾದನೆ ಕುಸಿತವಾಗಿದ್ದು, ಮಾವು ಬೆಳೆಗಾರರು ಸಂಕಷ್ಟದಲ್ಲಿರುವರು. ರೈತರ ಸಮಸ್ಯೆಗಳನ್ನು ಆಲಿಸಿ ರೈತರಿಗೆ ವೈಜ್ಞಾನಿಕವಾಗಿ ತೋಟದ ನಿರ್ವಹಣೆ ಮಾಡುವ ಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಳ್ಳಬೇಕೆಂದು ಹೇಳಿದರು.
ಕೃಷಿ ವಿಶ್ವ ವಿದ್ಯಾಲಯ (ಜಿಕೆವಿಕೆ), ತಳಿ ಅಭಿವೃದ್ಧಿ ವಿಭಾಗದ ನಿವೃತ್ತ ತೋಟಗಾರಿಕಾ ಪ್ರಾಧ್ಯಾಪಕ ಡಾ.ಜಿ.ಕೆ.ಮುಕುಂದ ಮಾತನಾಡಿ, ಆಪೂಸ್ ತಳಿಯೊಂದಿಗೆ ವಿವಿಧ ಮಾವಿನ ತಳಿಗಳಾದ ಕೇಸರ, ಮಲ್ಲಿಕಾ ಹಾಗೂ ರತ್ನ ತಳಿಗಳನ್ನು ಬೆಳೆಯುವದರಿಂದ ಉತ್ತಮ ಪರಾಗಸ್ಪರ್ಶಗೊಂಡು ಅಧಿಕ ಇಳುವರಿ ಪಡೆಯಬಹುದು ಎಂದು ಹೇಳಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಪ್ರಧಾನ ವಿಜ್ಞಾನಿ ಡಾ.ಬಿ.ಎಲ್.ಮಂಜುನಾಥ ಮಾತನಾಡಿ, ತಮ್ಮ ಸಂಸ್ಥೆಯಿAದ ಬಿಡುಗಡೆಯಾದ ವಿವಿಧ ಮಾವಿನ ತಳಿಗಳು ಮತ್ತು ಮಾವಿನ ಬೆಳೆಯ ನಿರ್ವಹಣೆಯಲ್ಲಿ ಅನುಸರಿಸಬೇಕಾದ ವಿವಿಧ ತಂತ್ರಜ್ಞಾನಗಳ ಕುರಿತು ರೈತರಿಗೆ ವಿವರಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಯ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತç ವಿಭಾಗದ ಸಹಪ್ರಾಧ್ಯಾಪಕ ಡಾ.ಎಸ್.ಎಮ್. ಪ್ರಸನ್ನ ಮಾತನಾಡಿ, ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಬಳಕೆ ಹಾಗೂ ಮಾವಿನ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ವಿವರಿಸಿದರು.
ಜೈವಿಕ ತಂತ್ರಜ್ಞಾನ ಮತ್ತು ಬೆಳೆ ಅಭಿವೃದ್ಧಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಅವಟಿ ಮಾತನಾಡಿ, ಮಾವಿನ ಬೆಳೆಯಲ್ಲಿ ನೀರು ನಿರ್ವಹಣೆ ಮತ್ತು ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಕಟ್ಟಿದ ಮಾವಿನಕಾಯಿಗಳನ್ನು ಉಳಿಸಿಕೊಳ್ಳಲು ಮಾವಿನ ಗಿಡದ ಬುಡದಲ್ಲಿ ಹುಲ್ಲಿನ ಹೊದಿಕೆ ಹಾಕುವುದರಿಂದ ತೀವ್ರ ಬಿಸಿಲಿನಿಂದಾಗುವ ಸ್ಪಾಂಜಿ ಟಿಶ್ಯು ಸಮಸ್ಯೆಯನ್ನು ಕಡಿಮೆ ಮಾಡಬಹುದು ಹಾಗೂ ಬೆಳೆ ಪ್ರಚೋದಕವಾದ ನ್ಯಾಫ್ತಲಿನ್ ಅಸಿಟಿಕ್ ಆ್ಯಸಿಡ್ ಸಿಂಪರಣೆಯನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಹಣ್ಣು ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪ್ರವೀಣ ಜೋಳಗಿಕರ ಮಾತನಾಡಿ, ಮಾವಿನ ಬೆಳೆಯಲ್ಲಿ ಗಿಡಗಳಿಗೆ ಆಕಾರ ಕೊಡುವುದು, ಚಾಟನಿ ಮಾಡುವುದು, ಅಂತರ ಬೆಳೆಗಳು ಮತ್ತು ಕೊಯ್ಲೋತ್ತರ ತಂತ್ರಜ್ಞಾನಗಳ ಕುರಿತು ಹೇಳಿದರು.
ಕೀಟಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ಜೆ.ಬಿ.ಗೋಪಾಲಿ ಮಾತನಾಡಿ, ಸಮಯಕ್ಕೆ ಸರಿಯಾಗಿ ಜಿಗಿ ಹುಳುಗಳ ನಿರ್ವಹಣೆಗಾಗಿ ಜೈವಿಕ ಹಾಗೂ ರಾಸಾಯನಿಕಗಳ ಸಿಂಪರಣೆ, ಹಣ್ಣು ನೊಣಗಳ ನಿರ್ವಹಣೆಗಾಗಿ ಮೋಹಕ ಬಲೆಗಳನ್ನು ಹಾಕುವುದು ಮತ್ತು ಕಾಂಡಕೊರಕಗಳ ನಿರ್ವಹಣೆಗಾಗಿ ಮರಗಳ ಕಾಂಡಕ್ಕೆ ಸಂರಕ್ಷಣಾ ಲೇಪನ ಹಚ್ಚುವ ಕ್ರಮಗಳನ್ನು ತಿಳಿಸಿದರು.
ಸಸ್ಯ ರೋಗ ಶಾಸ್ತç ವಿಭಾಗದ ಸಹ ಪ್ರಾಧ್ಯಾಪಕ ಡಾ.ರಮೇಶ ಅವರು, ಮಾವಿನ ಬೆಳೆಯಲ್ಲಿ ಪ್ರಮುಖ ರೋಗಗಳಾದ ಬೂದಿರೋಗ ಹಾಗೂ ಚಿಬ್ಬು ರೋಗಗಳ ನಿರ್ವಹಣಾ ಕ್ರಮಗಳನ್ನು ತಿಳಿಸಿದರು. ನಂತರ ಮಾವು ಬೆಳೆಗಾರರ ಸಮಸ್ಯಾತ್ಮಕ ತೋಟಗಳಿಗೆ ತಪಾಸಣಾ ಭೆಟ್ಟಿಯನ್ನು ಮಾಡಿ, ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ತೋಟಗಳ ನಿರ್ವಹಣೆಯ ಕುರಿತು ವಿವರಿಸಿದರು.
ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕ ಡಾ.ಶಶಿಕಾಂತ ಕೋಟಿಮನೆ, ಜಿಲ್ಲೆಯ ಮಾವು ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ೫೬ ಜನ ಮಾವು ಬೆಳೆಗಾರರು ಭಾಗವಹಿಸಿ, ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net