145ಕ್ಕೇರಿದ ಮಂಗನಬಾವು ಪ್ರಕರಣ, ಮುಂಡಗೋಡ ವಸತಿ ಶಾಲೆಗೆ ಮೂರು ದಿನ ರಜೆ ಘೊಷಿಸಿದ ಡಿಸಿ ಲಕ್ಷ್ಮೀಪ್ರಿಯಾ

22mnd1= manganaahu
Published on

ಮುಂಡಗೋಡ: ಪಟ್ಟಣದ ಇಂದಿರಾ ಗಾಂಧಿ ವಸತಿ ಶಾಲೆಯ 50 ಮಕ್ಕಳಲ್ಲಿ ಗುರುವಾರ ಕಂಡು ಬಂದಿದ್ದ ಮಂಗನಬಾವು ಪ್ರಕರಣ ಶುಕ್ರವಾರ 145ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಮೂರು ದಿನ ರಜೆ ಘೊಷಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಯಾ ಆದೇಶ ಹೊರಡಿಸಿದ್ದಾರೆ.

ಪಟ್ಟಣದ ಖಾಸಗಿ ಕಟ್ಟಡದಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆಯ ಮಕ್ಕಳಿಗೆ ಮೂರ್ನಾಲ್ಕು ದಿನಗಳಿಂದ ಮಂಗನಬಾವು ಕಾಣಿಸಿಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲಿದೆ. ಮುಂಜಾಗ್ರತೆಯಾಗಿ ಶಾಲೆಗೆ ಮೂರು ದಿನ ರಜೆ ಘೊಷಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಮುಂದುವರಿದ ಚಿಕಿತ್ಸೆ: ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ ನೇತೃತ್ವದ ವೈದ್ಯರ ತಂಡ ಶಾಲೆಯಲ್ಲಿಯೇ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿತು. ವಿವಿಧ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.  ಈ ಮಧ್ಯೆ, ಐದು ದಿನಗಳ ಹಿಂದೆ ಎರಡ್ಮೂರು ವಿದ್ಯಾರ್ಥಿಗಳಲ್ಲಿ ಮಂಗನಬಾವು ಕಾಣಿಸಿಕೊಂಡಿತ್ತು. ಬಾಧಿತರಿಗೆ ಅಂದೇ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ್ದರೆ ಕಾಯಿಲೆ ಇಷ್ಟೊಂದು ಗಂಭೀರತೆ ಪಡೆದುಕೊಳ್ಳುತ್ತಿರಲಿಲ್ಲ ಎಂದು ಅನೇಕ ಪಾಲಕರು ಆರೋಪಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net