ರಸ್ತೆಯಲ್ಲಿ ಸಿಕ್ಕ ಮಾಂಗಲ್ಯ ಸರ ವಾಪಸ್‌ನೀಡಿ ಪ್ರಾಮಾಣಿಕತೆ

2kls2
ಜಯಲಕ್ಷ್ಮೀ
Published on

ಕಳಸ: ಕಳಸ ಪಟ್ಟಣದಲ್ಲಿ ಸಿಕ್ಕ 15 ಗ್ರಾಂ ತೂಕದ ಮಾಂಗಲ್ಯ ಸರವನ್ನು ಮರಳಿ ನೀಡಿ ಶ್ರೀಮತಿ ಜಯಲಕ್ಷ್ಮೀ ಪ್ರಮಾಣಿಕತೆ ತೋರಿದ್ದಾರೆ. ಕಳಸದ ಪ್ರೋಪೆಷನಲ್ ಕೊರಿಯರ್‌ನಲ್ಲಿ ಕೆಲಸ ಮಾಡುತ್ತಿದ್ದ ಜಯಲಕ್ಷ್ಮೀ ಅವರಿಗೆ ಕಳಸ ಪಟ್ಟಣದಲ್ಲಿ 15 ಗ್ರಾಂ ತೂಕದ ಮಾಂಗಲ್ಯ ಸಿಕ್ಕಿತ್ತು. ಅದನ್ನು ಜಯಕುಮಾರ್ ಭಟ್ ಅವರಿಗೆ ನೀಡಿ ವಾರಿಸುದಾರರನ್ನು ಹುಡುಕಿ ತಲುಪಿಸುವಂತೆ ನೀಡಿದ್ದರು. ಜಯಕುಮಾರ್ ಭಟ್ ಅದನ್ನು ಕಳಸ ಪೊಲೀಸ್ ಠಾಣೆಗೆ ನೀಡಿದ್ದರು.
ಮಾಂಗಲ್ಯ ಸರ ಸಿಕ್ಕ ವಿಚಾರ ಸಾಮಾಜಿಕ ಜಾಲದಲ್ಲಿ ವೈರಲ್ ಮಾಡಲಾಗಿತ್ತು. ಈ ಮಾಂಗಲ್ಯ ಸರ ಗಣೇಶ್ ಕುಕ್ಕೋಡ್ ಅವರ ಪತ್ನಿಯದಾಗಿತ್ತು. ಕಳೆದು ಹೋದ ಮಾಂಗಲ್ಯ ಸರವನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ವ್ಯಾಟ್ಸಾಪ್ ಹರಿದಾಡುತ್ತಿದ್ದ ಮೆಸೆಜ್ ನೋಡಿ ಕಳಸ ಪೊಲೀಸ್ ಠಾಣೆಗೆ ತೆರಳಿ ಪಿಎಸೈ ನಿತ್ಯಾನಂದ ಅವರಿಂದ ಮರಳಿ ಪಡೆದುಕೊಂಡಿದ್ದಾರೆ. ಮಾಂಗಲ್ಯ ಸರವನ್ನು ಮರಳಿ ನೀಡಿದ ಜಯಲಕ್ಷ್ಮೀ ಅವರ ಪ್ರಾಮಾಣಿಕತೆಗೆ ಕಳಸದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net