ಮಾಂಗಲ್ಯ ಸರ ಮರಳಿಸಿ ಮಾನವೀಯತೆ

SARA
Published on

ಯಲ್ಲಾಪುರ: ತಾಲೂಕಿನ ಬಾರೆ-ಚಿನ್ನಾಪುರ ರಸ್ತೆಯಲ್ಲಿ ಸಿಕ್ಕಿದ್ದ ಮಾಂಗಲ್ಯ ಸರವನ್ನು ಆರ್.ವಿ. ಭಟ್ಟ ಹೊಸಕುಂಬ್ರಿಎಂಬುವವರು ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಬಾರೆ-ಚಿನ್ನಾಪುರ ರಸ್ತೆಯ ಬೆಳ್ಮನೆ ಘಟ್ಟದಲ್ಲಿ ಮಂಗಳವಾರ ಬೈಕ್‌ನಲ್ಲಿ ಹೋಗುವಾಗ ಕೃಷ್ಣಮೂರ್ತಿ ಗಾಂವ್ಕರ ಶೇವ್ಕಾರ ಅವರ 13 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಕಳೆದು ಹೋಗಿತ್ತು. ಇದು ಆರ್.ವಿ. ಭಟ್ಟ ಅವರಿಗೆ ದೊರೆತಿತ್ತು. ಸರದ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಮಾಹಿತಿ ನೀಡಿದ್ದರು. ಸರ ಯಾರದು ಎಂದು ಖಚಿತ ಪಡಿಸಿಕೊಂಡು ಪಡೆಯಲು ತಿಳಿಸಿದ್ದರು.

ಸರ ತಮ್ಮದೆಂದು ಖಾತ್ರಿ ಪಡಿಸಿದ ಕೃಷ್ಣಮೂರ್ತಿ ಅವರಿಗೆ ಮರಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net