ಈಜು ಕೊಳದಲ್ಲಿ ಸಿಕ್ಕಿದ ಮಾಂಗಲ್ಯ ಸರ ವಾರಸುದಾರರಿಗೆ ಹಿಂದಿರುಗಿಸಿದ ಅಂತರಾಷ್ಟ್ರೀಯ ಈಜುಪಟು

IMG-20230924-WA0010
Published on

ಪುತ್ತೂರು: ಈಜು ಕೊಳದಲ್ಲಿ ಸಿಕ್ಕಿದ ರೂ. 1.50 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪುತ್ತೂರಿನ ಅಂತರಾಷ್ಟ್ರೀಯ ಈಜು ಪಟು ತ್ರಿಶೂಲ್ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ನಿವೃತ್ತ ಶಿಕ್ಷಕಿಯೊಬ್ಬರ ಚಿನ್ನದ ಮಾಂಗಲ್ಯ ಸರ ಪುತ್ತೂರು ಬಾಲವನ ಈಜು ಕೊಳದಲ್ಲಿ ಕಳೆದು ಹೋಗಿತ್ತು.ಅಂತರಾಷ್ಟ್ರೀಯ ಈಜು ಪಟು, ಪುತ್ತೂರು ಸಂತ ಫಿಲೋಮಿನ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ತ್ರಿಶೂಲ್ ಗೌಡ ಅವರು ಈಜು ಕೊಳದಲ್ಲಿ ನೀರಿನಲ್ಲಿ ಮಾಂಗಲ್ಯ ಸರವನ್ನು ಹುಡುಕಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.ತ್ರಿಶೂಲ್ ಗೌಡ ಮತ್ತು ಅವರ ಸಹೋದರ ಶಿಶಿರ್ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಒಳಗಿನ ವರುಣ ಮೂರ್ತಿ ಪತ್ತೆ ಹಚ್ಚಿದವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net