

ಶಿರಸಿ: ಬಸ್ ಹತ್ತುವ ವೇಳೆ ಮಾಂಗಲ್ಯ ಸರ ಕಳೆದುಕೊಂಡಿದ್ದ ಮಹಿಳೆಯನ್ನು ಪತ್ತೆ ಹಚ್ಚಿ ನಗರ ಪೊಲೀಸ್ ಠಾಣೆ ಪೊಲೀಸರು ಮಾಂಗಲ್ಯ ಸರ ಒಪ್ಪಿಸಿದರು.
ತಾಲೂಕಿನ ಬಕ್ಕಳದ ಲತಾ ವಿನಯ ಹೆಗಡೆ ಮಾಂಗಲ್ಯ ಸರ ಕಳೆದುಕೊಂಡಿದ್ದರು. ಇಲ್ಲಿಯ ಶಿವಾಜಿ ಚೌಕದಲ್ಲಿ ಬಸ್ ಹತ್ತುತ್ತಿದ್ದ ವೇಳೆ ಮಾಂಗಲ್ಯ ಸರ ತುಂಡಾಗಿ ಕೆಳಗೆ ಬಿದ್ದಿತ್ತು. ಪವನ ರಾಮದಾಸ ಅವರಿಗೆ ಸರ ಸಿಕ್ಕಿತ್ತು. ಪವನ ಅವರು ನಗರ ಠಾಣೆ ಪೊಲೀಸರಿಗೆ ಸರವನ್ನು ಒಪ್ಪಿಸಿದ್ದರು.
ಪೊಲೀಸರು ಮಂಗಳವಾರ ಲತಾ ಹೆಗಡೆ ಅವರಿಗೆ ಸೇರಿದ್ದೆಂದು ದೃಢಪಡಿಸಿಕೊಂಡು ಅವರ ಸಹೋದರ ನಾಗರಾಜ ಭಟ್ ಅವರಿಗೆ ಮಾಂಗಲ್ಯ ಸರ ಹಸ್ತಾಂತರಿಸಿದರು. ಈ ವೇಳೆ ಪಿಎಸೈ ನಾಗಪ್ಪ ಬಿ., ರಮೇಶ ದುಭಾಶಿ ಇತರರಿದ್ದರು. ಪ್ರಾಮಾಣಿಕತೆ ಮೆರೆದ ಪವನ ರಾಮದಾಸ್ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಅಭಿನಂಧಿಸಲಾಯಿತು.