

ನರೇಗಲ್ಲ: ಪಟ್ಟಣದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ, ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಪಟ್ಟಣದ ಭಾಗ್ಯನಗರ ನಿವಾಸಿ ಭಾಗ್ಯ ಬಸವರಾಜ ಚಿಕ್ಕೊಪ್ಪದ ಮನೆಗೆ ತೆರಳುವಾಗ ನಾಗಕೆರೆಯ ಹತ್ತಿರ ಬೈಕ್‌ನಲ್ಲಿ ಬಂದ 25ರಿಂದ 30 ವರ್ಷ ಪ್ರಾಯದ ಇಬ್ಬರು ಆಗಂತುಕರು ಮಹಿಳೆಯ ಕೊರಳಿಗೆ ಕೈಹಾಕಿ ಅಂದಾಜು 1.5 ಲಕ್ಷ ರೂ. ಮೌಲ್ಯದ ತಾಳಿ ಮತ್ತು ಬಂಗಾರದ ಚೈನ್ ಕಿತ್ತುಕೊಂಡಿದ್ದಾರೆ. ಮಹಿಳೆ ಕೂಗಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಥೋತ್ಸವ ಕಾರಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದು ಕಳ್ಳರಿಗೆ ಅನುಕೂಲವಾಗಿದೆ. ನರೇಗಲ್ಲ ಠಾಣೆಯಲ್ಲಿ ದೂರು ದಾಖಲಾಗಿದೆ.