ವೃದ್ಧೆಯರಿಬ್ಬರ ಮಾಂಗಲ್ಯ ಸರ ಕಿತ್ತು ಪರಾರಿ

mangalya sara theft
ಮಾಜಿ ಸಚಿವ ಈಶ್ವರಪ್ಪ ಅವರ ಮನೆ ಮುಂದೆ ವೃದ್ಧೆಯರ ಬಳಿ ವಿಳಾಸ ಕೇಳಿದ ಸರಗಳ್ಳರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Published on

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮನೆ ಸಮೀಪವೇ ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಬೆಳಗಿನಜಾವ ವಾಕಿಂಗ್ ಮಾಡುತ್ತಿದ್ದ ವೃದ್ಧೆಯರಿಬ್ಬರ 2.50 ಲಕ್ಷ ರೂ.ಮೌಲ್ಯದ ಮಾಂಗಲ್ಯ ಸರಗಳ ಕಿತ್ತು ಪರಾರಿಯಾಗಿದ್ದಾರೆ.

ಮಲ್ಲೇಶ್ವರ ನಗರದ ನಾಗರತ್ನಾ ಮತ್ತು ಸುಲೋಚನಾ ಎಂಬುವರ 61 ಗ್ರಾಂ ಮಾಂಗಲ್ಯ ಸರ ಕಳೆದುಕೊಂಡವರು. ಗುರುವಾರ ಬೆಳಗಿನ ಜಾವ ನಾಗರತ್ನ ಮತ್ತು ಸುಲೋಚನಾ ಎಂಬುವರು ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ವೃದ್ಧೆಯರನ್ನು ಮಾತನಾಡಿಸಿದ್ದಾರೆ. ಬಳಿಕ ವೃದ್ಧೆಯರು ವಾಕಿಂಗ್ ಮುಂದುವರಿಸಿದ್ದು ಹಿಂಬದಿಯಿಂದ ಹೋದ ಸವಾರ ನಾಗರತ್ನಾ ಅವರ 30 ಗ್ರಾಂ ಹಾಗೂ ಸುಲೋಚನಾ ಅವರ 31 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಸದರಿ ಘಟನೆಯ ದೃಶ್ಯ ಕೆ.ಎಸ್.ಈಶ್ವರಪ್ಪ ನಿವಾಸದ ಮುಂಭಾಗ ಅಳವಡಿಸಿರುವ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಕೋಟೆ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net