ಮಾಂಗಲ್ಯ ಭಾಗ್ಯದಡಿ ಸಪ್ತಪದಿ ತುಳಿದ ಜೋಡಿ

26kls4
ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಮಾಂಗಲ್ಯ ಭಾಗ್ಯ ಯೋಜನೆಯಡಿಯಲ್ಲಿ ವಿವಾಹ ನೆರವೇರಿತು.
Published on

ಕಳಸ: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಯೋಜನೆಯಡಿ ಇಲ್ಲಿನ ಸುಪ್ರಿಸಿದ್ದ ಕಲಶೇಶ್ವರ ದೇವಸ್ಥಾನದಲ್ಲಿ ಭಾನುವಾರ ವಿವಾಹ ನೆರವೇರಿತು.

ಕಂಚಿನಕೆರೆಯ ಅಕ್ಷತಾ ಹಾಗೂ ಶೃಂಗೇರಿ ಸಮೀಪ ನೆಮ್ಮಾರಿನ ನವೀನ ಮಾಂಗಲ್ಯ ಭಾಗ್ಯ ಯೋಜನೆಯಡಿ ಸಪ್ತಪದಿ ತುಳಿದರು.ದೇವಸ್ಥಾನದ ಅರ್ಚಕ ಅನಂತ ಪದ್ಮನಾಭ ಭಟ್ ವಿವಾಹ ಕಾರ್ಯವನ್ನು ನೆರವೇರಿಸಿದರು. ದೇವಸ್ಥಾನದಿಂದ ವಿವಾಹಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ವರನಿಗೆ 5 ಸಾವಿರ ರೂ., ವಧುವಿಗೆ 10 ಸಾವಿರ ರೂ. ಹಾಗೂ 40 ಸಾವಿರ ರೂ. ಮೌಲ್ಯದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ನೀಡಲಾಯಿತು. ವಧು-_ವರರ ಬಂಧುಗಳಿಗೆ ಊಟೋಪಾಚರದ ವ್ಯವಸ್ಥೆಯನ್ನು ದೇವಸ್ಥಾನದಲ್ಲಿ ಮಾಡಲಾಗಿತ್ತು.
ಕಳಸ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪ್ರೇಮಲತಾ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯ ಸತೀಶ್ ಕಲ್ಲಾನೆ, ಕಳಸ ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ್, ದೇವಾಲಯದ ನೌಕರರಾದ ಸತೀಶ್, ಜಗದೀಶ್ ಭಟ್, ವಾಸು ಭಟ್ ವಿವಾಹಕ್ಕೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net