ಮಂಗಳೂರು ಲಿಫ್ಟ್‌ನಲ್ಲಿ ಸಿಲುಕಿ ಯುವಕ ಮೃತ್ಯು

ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್
ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್
Published on
ಮಂಗಳೂರು: ನಗರದ ಕುಂಟಿಕಾನ ಬಳಿಯ ಇನ್ಸ್ಟಾಮಾರ್ಟ್ ಕಟ್ಟಡದಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಯುವಕ ಮೃತಪಟ್ಟ ದುರಂತ ಘಟನೆ ಶನಿವಾರ ನಡೆದಿದೆ.
ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಮೃತಪಟ್ಟ ಯುವಕ.
ನೌಫಲ್ ಅವರು ಕಾರ್ಯನಿಮಿತ್ತ ಲಿಫ್ಟ್ ನಲ್ಲಿ ತೆರಳಿದಾಗ ಒಂದನೇ ಮಹಡಿ ಮತ್ತು ನೆಲಮಹಡಿ ಮಧ್ಯಭಾಗದಲ್ಲಿ ಲಿಫ್ಟ್ ಕೆಟ್ಟು ನಿಂತಿತ್ತು. ಈ ಸಂದರ್ಭ ನೌಫಲ್ ಅವರು ಲಿಫ್ಟ್ ನಲ್ಲಿ ಬಾಕಿಯಾಗಿರುವ ಬಗ್ಗೆ ಮಾಹಿತಿ ಪಡೆದ ಸಹೋದ್ಯೋಗಿಗಳು ರಕ್ಷಣೆಗೆ ಧಾವಿಸಿದ್ದಾರೆ. ಈ ಸಂದರ್ಭ ಒಂದನೇ ಮಹಡಿಯಲ್ಲಿ ಲಿಫ್ಟ್ ನ ಅರ್ಧಭಾಗ ಇದ್ದ ಕಾರಣ ಲಿಫ್ಟ್ ಬಾಗಿಲು ಬಲವಂತದಿಂದ ತೆರೆದು ನೌಫಲ್ ರಕ್ಷಣೆಗೆ ಮುಂದಾಗಿದ್ದಾರೆ. ಈ ಸಂದರ್ಭ ನೌಫಲ್ ಕೈ ಹಿಡಿದು ಮೆಲೆತ್ತುವ ಸಂದರ್ಭ ಏಕಾಏಕಿ ಲಿಫ್ಟ್ ಚಲಿಸಿ ದುರಂತ ಸಂಭವಿಸಿದೆ. ಗಂಭೀರ ಗಾಯಗೊಂಡ ನೌಫಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net