VIDEO| ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದ ಮಹಿಳೆ!

1150037
Published on

ಮಂಗಳೂರಿನ ಮಹಿಳಾ ಪ್ರಾಣಿಪ್ರೇಮಿಯೋರ್ವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಪಾಳು ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ.

ರಜಿನಿ ದಾಮೋದರ ಶೆಟ್ಟಿ ಎಂಬ ಮಹಿಳೆ, ಜೆಪ್ಪು ಬಳಿಯ ಸಂದೀಪ್ ಎಂಬುವರ ಮನೆ ಹತ್ತಿರವಿದ್ದ 80 ಅಡಿ ಆಳದ ಪಾಳು ಬಾವಿಗಿಳಿದು ಸಾಹಸ ಪ್ರದರ್ಶಿಸಿದ್ದಾರೆ.

ತಮ್ಮ ಮನೆಯ ಬೆಕ್ಕಿನ ಮರಿ ಅಚಾನಕ್ ಆಗಿ ಬಾವಿಗೆ ಬಿದ್ದಿದ್ದು, ರಜಿನಿ ಅವರಿಗೆ ಮನೆ ಮಾಲೀಕ ಸಂದೀಪ್ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣ ಧಾವಿಸಿದ ರಜಿನಿ ಹಗ್ಗ ಕಟ್ಟಿಕೊಂಡು ಬಾವಿಗಿಳಿದು ಬೆಕ್ಕಿನ ಮರಿ ರಕ್ಷಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net