VIDEO| ಶೂ ಧರಿಸಿಕೊಂಡು ಶಿವನ ವಿಗ್ರಹ ಪೀಠದ ಮೇಲೆ ಟಿಕ್​ಟಾಕ್​ ಮಾಡಿದ ನಾಲ್ವರ ಬಂಧನ

Tik Tok
Published on

ಮಂಗಳೂರು: ಶಿವನ ವಿಗ್ರಹ ಪೀಠದ ಮೇಲೆ ಟಿಕ್​ಟಾಕ್​ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ನಾಲ್ವರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಸೂದ್, ಅಜೀಮ್, ಅಬ್ದುಲ್ ಲತೀಪ್ ಹಾಗೂ ಅರ್ಪಾಜ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಜೀಪದ ನಿವಾಸಿಗಳಾಗಿದ್ದು, ಬಂಟ್ವಾಳ ತಾಲೂಕಿನ ಕಂಚಿನಡ್ಕ ಗ್ರಾಮದಲ್ಲಿರುವ ಶಿವನ ವಿಗ್ರಹ ಪೀಠದ ಮೇಲೆ ಟಿಕ್​ಟಾಕ್​ ಮಾಡಿದ್ದಾರೆ.

ಶಿವನ ವಿಗ್ರಹ ಪೀಠವು ಕಂಚಿನಡ್ಕದ ಹಿಂದೂ ರುದ್ರಭೂಮಿಯಲ್ಲಿದ್ದು, ಅದರ ಮೇಲೆ ಶೂ ಧರಿಸಿಕೊಂಡು ನಾಲ್ವರು ವಿಡಿಯೋ ಮಾಡಿದ್ದಾರೆ. ವಿಡಿಯೋ ವೈರಲ್​ ಆದ ಬೆನ್ನಲ್ಲೇ ಈ ಸಂಬಂಧ ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಕ್ಕೆ ಧಕ್ಕೆಯಾಗಿದೆ ಎಂದು ರುದ್ರಭೂಮಿ ಅಧ್ಯಕ್ಷ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net