ಮಂಗಳೂರು ಕೆಲಸ ಮಾಡಿದ್ದ ಬ್ಯಾಂಕ್‌ನಲ್ಲೇ ಆತ್ಮಹತ್ಯೆ

sucide
Published on

ಮಂಗಳೂರು: ನಗರದ ಕೊಡಿಯಾಲಬೈಲ್‌ನಲ್ಲಿರುವ ತಾನು ಕೆಲಸ ಮಾಡಿದ ಬ್ಯಾಂಕ್‌ನಲ್ಲಿಯೇ ನಿವೃತ್ತ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಗುರುವಾರ ಬೆಳಕಿಗೆ ಬಂದಿದೆ.

ಅಳಕೆ ನಿವಾಸಿ ಗಿರಿಧರ್ ಯಾದವ್ (61)ಆತ್ಮಹತ್ಯೆ ಮಾಡಿಕೊಂಡವರು. ಇಲ್ಲಿನ ಮಂಜೇಶ್ವರ ಗೋವಿಂದ ಪೈ ವೃತ್ತದ ಬಳಿಯ ಬ್ಯಾಂಕ್ ಒಂದರಲ್ಲಿ ಸುಮಾರು 40 ವರ್ಷದಿಂದ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಅವರು ಸುಮಾರು ಆರು ತಿಂಗಳ ಹಿಂದೆ ನಿವೃತ್ತರಾಗಿದ್ದರು. ಆದರೆ ಆ ಬಳಿವೂ ಬ್ಯಾಂಕ್‌ಗೆ ಬಂದು ಹೋಗುತ್ತಿದ್ದರು. ಅದರಂತೆ ಬುಧವಾರವೂ ಬ್ಯಾಂಕಿಗೆ ಬಂದಿದ್ದ ಅವರು, ಅನಂತರ ಮನೆಗೆ ಹೋಗದೆ ನಾಪತ್ತೆಯಾಗಿದ್ದರು ಈ ಬಗ್ಗೆ ಪತ್ನಿ ಬಂದರು ಠಾಣೆಗೆ ದೂರು ನೀಡಿದ್ದರು.

ಗುರುವಾರ ಬೆಳಗ್ಗೆ ಬ್ಯಾಂಕಿನ ಸಿಬಂದಿ ಸ್ಟೋರ್‌ರೂಂ ತೆರೆದಾಗ ಗಿರಿಧರ್ ಯಾದವ್ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬುಧವಾರ ಬ್ಯಾಂಕ್‌ಗೆ ಬಂದಿದ್ದ ಅವರು ಮೂತ್ರಶಂಕೆಗೆಂದು ಸ್ಟೋರ್ ರೂಂ ಕಡೆಗೆ ಹೋಗಿದ್ದು ಬಳಿಕ ಅಲ್ಲೇ ಅವಿತು ಕುಳಿತು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಆ ಬಗ್ಗೆ ತೀವ್ರ ಬೇಸರದಿಂದ ಇದ್ದರು. ಪವರ್‌ಲ್ಟಿರ್ ಪಟುವೂ ಆಗಿದ್ದ ಯಾದವ್ ಹಲವು ಪದಕಗಳನ್ನು ಪಡೆದಿದ್ದರು.

ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net