ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಗೆ 17 ಪದಕ

mng--25 Aug Sketing
Published on

ಮಂಗಳೂರು: ಬೆಂಗಳೂರಿನಲ್ಲಿ ಸಿಟಿ ಅರೇನಾ ಸ್ಕೇಟಿಂಗ್ ರಿಂಕ್‌ನಲ್ಲಿ ಆ.19 ರಿಂದ 21 ರವರೆಗೆ ನಡೆದ ಕರ್ನಾಟಕ ರಾಜ್ಯ ಮುಕ್ತ ಚಾಂಪಿಯನ್‌ಶಿಪ್‌ನಲ್ಲಿ ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ಮಂಗಳೂರು 3 ಚಿನ್ನ, 7 ಬೆಳ್ಳಿ ಮತ್ತು 7 ಕಂಚು ಗೆದ್ದು ಕೊಂಡಿತು.


ಡೇನಿಯಲ್ ಸಾಲ್ವಡೋರ್ ಕನ್ಸೆಸ್ಸಾವೊ 1 ಚಿನ್ನ 2 ಬೆಳ್ಳಿ, ಡಾಶಿಯಲ್ ಅಮಂಡಾ ಕನ್ಸೆಸ್ಸಾವೊ 1 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಪಡೆದರು. ಮುಹಮ್ಮದ್ ಶಾಮಿಲ್ ಅರ್ಷದ್ 1 ಚಿನ್ನ, 1 ಬೆಳ್ಳಿ ಮತ್ತು 1 ಕಂಚು ಪಡೆದರು. ತನ್ಮಯ್ ಎಂ. ಕೊಟ್ಟಾರಿ 1 ಬೆಳ್ಳಿ ಮತ್ತು 3 ಕಂಚು ಪಡೆದರು.


ನಿರ್ಮಯ್ ವೈ ಎನ್ 2 ಬೆಳ್ಳಿ ಮತ್ತು 1 ಕಂಚು ಪಡೆದರು. ಕೇಟ್ ಆರ್ವಿ ವಾಜ್ 1 ಕಂಚು ಪಡೆದರು. ಇವರೆಲ್ಲರೂ ಫ್ರಾನ್ಸಿಸ್ ಡೋರಿಸ ಸ್ಕೈಟ್ ಸಿಟಿಯಲ್ಲಿ ಮೋಹನ್ ದಾಸ್ ಕೆ., ಜಯರಾಜ್ ಮತ್ತು ರಮಾನಂದ್ ಕೆ.ವಿ. ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net